Adhyatma Suladi

Composer : Shri Vyasarajaru

By Smt.Shubhalakshmi Rao

ಶ್ರೀ ವ್ಯಾಸರಾಜ ವಿರಚಿತ ಅಧ್ಯಾತ್ಮ ಸುಳಾದಿ

ಧ್ರುವತಾಳ

ಕಾಮವೆಂಬ ಹೆಚ್ಚಿನ ಕಾಡುಗಿಚ್ಚು
ಒಂದು ಕಡೆಯಲೆನ್ನ ಸುಡುತಲಿದೆ
ಕ್ರೋಧವೆಂಬ ಹೆಬ್ಬುಲಿ ಹಸಿದು
ಒಂದು ಕಡೆಯಲೆನ್ನ ತಿನ್ನುತಲಿದೆ
ಲೋಭವೆಂಬ ಮಹರಕ್ಕಸನು
ಒಂದು ಕಡೆಯಲೆನ್ನ ಹೀರುತೈಧಾನೆ
ಮೋಹವೆಂಬ ಕತ್ತಲೆಯು ಕವಿದು
ದಿಕ್ಕು ದೆಸೆ ಏನು ತಿಳಿಯದು
ಮದವೆಂಬ ಸೊಕ್ಕಿದ ಕಾಡಾನೆ
ಒಂದು ಕಡೆ ಎನ್ನ ಸೀಳುತಿದೆ
ಮತ್ಸರವೆಂಬ ಮಹ ವಿಷದ ಚೇಳು
ಒಂದು ಕಡೆಯಲೆನ್ನ ಊರುತಿದೆ
ಈ ಪರಿ ಭವವೆಂಬಡವಿಯಲಿ
ನಾನಾ ಪರಿ ಶತ್ರುಗಳಿಗೊಳಗಾದೆ
ಶ್ರೀಪತಿ ಪರಮ ದಯಾನಿಧೆ ದೀನ
ನಾಥೆನ್ನೊಡೆಯ ರಕ್ಷಿಸು ಶ್ರೀಕೃಷ್ಣ || ೧ ||

ಮಠ್ಯತಾಳ

ಆಗದ ಹೋಗದ ಮನೆವಾರುತೆ ಬೇರೊಬ್ಬ
ಲೋಗರಿಗಾಗಿ ಹೊತ್ತು ಭವಾಟವಿಯಲ್ಲಿ
ರಾಗವೆಂಬ ಘನ ತೃಷೆಯಿಂದ ಬಾಯೊಣಗಿ
ಭೋಗವೆಂಬ ಬಯಲ ಮೃಗ ತೃಷ್ಣೆಗೋಡುತ
ಬೇಗೆಯಿಂದ ಬಿದ್ದೆನೊ ನರಕ ಕೂಪದಲಿ
ನಾಗಶಯನ ಎನ್ನನುದ್ಧರಿಸೊ ಸಿರಿಕೃಷ್ಣ || ೨ ||

ರೂಪಕತಾಳ

ಇಂದ್ರಿಯಂಗಳೆಂಬ ಕಳ್ಳರೈವರು
ಬಂಧಿಸಿ ತಮ್ಮ ವಿಷಯಕ್ಕೊಯ್ದೆನ್ನ
ಕಂದಿಸಿ ಜ್ಞಾನವೆಂಬ ದೃಷ್ಟಿಯ
ಎಂದೆಂದಿನ ಧರ್ಮ ಧನವನೊಯ್ವರು ಬಂಧಿಸಿ
ಇಂದಿರೇಶ ಲೋಕಪತಿ ಶ್ರೀಕೃಷ್ಣ ಎನ್ನ ತಂದೆ
ವಿಚಾರಿಸಲೊಲ್ಲದ್ಯಾಕೆ ಬಾಧಿಪೆ || ೩ ||

ಝಂಪೆತಾಳ

ನಾನಾ ಗರ್ಭವೆಂಬ ಕಂಪಿಲೊಮ್ಮೊಮ್ಮೆ
ಹೀನೋಚ್ಚ ಜನ್ಮವೆಂಬ ತಗ್ಗು ಮಿಟ್ಟಿಯಲೊಮ್ಮೆ
ಸ್ವರ್ಗವೆಂಬ ಪರ್ವತಾಗ್ರದಲೊಮ್ಮೊಮ್ಮೆ
ದುರ್ಗತಿಯೆಂಬ ಕಮರಿಯಲಿ ತಾನೊಮ್ಮೆ
ಬಂದೆ ಭವಾಟವಿಯಲಿ ನಿನ್ನ ಪಾದಾರ –
ವಿಂದದ ನೆರಳಲಿರಿಸೆನ್ನ ಸಿರಿಕೃಷ್ಣ || ೪ ||

ತ್ರಿಪುಟತಾಳ

ಹರಿದಾಸರಾರೆಂಬ ನೆರವಿಲ್ಲದೆ
ಹರಿಸೇವೆಯೆಂಬ ಪಥವ ಕಾಣದೆ
ಹರಿಪದವೆಂಬ ಜನುಮ ಭೂಮಿಯ
ಪರಿದು ದೂರದಲ್ಲಿ ತಪ್ಪೀಗ ಕಾಣದಲೆ
ಮರುಳಾದೆ ಭವಾಟವಿಯಲ್ಲಿ
ಸಿರಿಪತಿ ನಿನ್ನ ಸೇರಿಸೊ ಸಿರಿಕೃಷ್ಣ || ೫ ||

ಅಟ್ಟತಾಳ

ಮಾಯಯೆಂಬ ದುಷ್ಟರಾಯ
ಮಾನವೆಂಬ ಬಿನಗು ಮಂತ್ರಿ
ಇಂದ್ರಿಯಗಳೆಂಬ ತಿಂದೋಡುವ ಪರಿವಾರ
ಬಿಗಿದು ಕಟ್ಟಿ ಎನ್ನ ಹಗೆಗಳಿಗಿತ್ತರು
ಬಾಧೆಗೆ ಶ್ರೀ ಮಾಧವ ಎನ್ನ
ಕಾಮಾದಿ ಹಗೆಗಳ ಶಿಕ್ಷಿಸಿ
ರಕ್ಷಿಸೆನ್ನ ಸ್ವಾಮಿ ಸಿರಿಕೃಷ್ಣ || ೬ ||

ಆದಿತಾಳ

ತಾಪತ್ರಯವೆಂಬ ದಾವಾನಲದಿಂದ
ಪಾಪಾತ್ಮರ ಸಂಗವೆಂಬ ವಿಷವೃಕ್ಷದಿಂದ
ಕಾಪಥವೆಂಬ ಬಹು ತಪ್ಪು ಗತಿಗಳಿಂದ
ಕೋಪವೆಂಬಟ್ಟುವ ಕಾಳೋರಗದಿಂದ
ಈ ಪರಿಯಲಿ ನೊಂದೆ ಭವಾಟವಿಯಲ್ಲಿ
ನೀ ಪಾಲಿಸಲು ಬೇಕೆನ್ನನು ಸಿರಿಕೃಷ್ಣ || ೭ ||

ಜತೆ

ಅತ್ತಿತ್ತ ಸುತ್ತಿ ಭವಾಟವಿಯಲಿ ನೊಂದೆ
ಇತ್ತ ಬಾರೆಂದು ನಿನ್ನ ಹತ್ತಿಲಿರಿಸೊ ಸಿರಿಕೃಷ್ಣ ||


SrI vyAsarAja viracita adhyAtma suLAdi

dhruvatALa

kAmaveMba heccina kADugiccu
oMdu kaDeyalenna suDutalide
krOdhaveMba hebbuli hasidu
oMdu kaDeyalenna tinnutalide
lOBaveMba maharakkasanu
oMdu kaDeyalenna hIrutaidhAne
mOhaveMba kattaleyu kavidu
dikku dese Enu tiLiyadu
madaveMba sokkida kADAne
oMdu kaDe enna sILutide
matsaraveMba maha viShada cELu
oMdu kaDeyalenna Urutide
I pari BavaveMbaDaviyali
nAnA pari SatrugaLigoLagAde
SrIpati parama dayAnidhe dIna
nAthennoDeya rakShisu SrIkRuShNa || 1 ||

maThyatALa

Agada hOgada manevArute bErobba
lOgarigAgi hottu BavATaviyalli
rAgaveMba Gana tRuSheyiMda bAyoNagi
BOgaveMba bayala mRuga tRuShNegODuta
bEgeyiMda biddeno naraka kUpadali
nAgaSayana ennanuddhariso sirikRuShNa || 2 ||

rUpakatALa

iMdriyaMgaLeMba kaLLaraivaru
baMdhisi tamma viShayakkoydenna
kaMdisi j~jAnaveMba dRuShTiya
eMdeMdina dharma dhanavanoyvaru baMdhisi
iMdirESa lOkapati SrIkRuShNa enna taMde
vicArisalolladyAke bAdhipe || 3 ||

JaMpetALa

nAnA garBaveMba kaMpilommomme
hInOcca janmaveMba taggu miTTiyalomme
svargaveMba parvatAgradalommomme
durgatiyeMba kamariyali tAnomme
baMde BavATaviyali ninna pAdAra –
viMdada neraLalirisenna sirikRuShNa || 4 ||

tripuTatALa

haridAsarAreMba neravillade
harisEveyeMba pathava kANade
haripadaveMba januma BUmiya
paridu dUradalli tappIga kANadale
maruLAde BavATaviyalli
siripati ninna sEriso sirikRuShNa || 5 ||

aTTatALa

mAyayeMba duShTarAya
mAnaveMba binagu maMtri
iMdriyagaLeMba tiMdODuva parivAra
bigidu kaTTi enna hagegaLigittaru
bAdhege SrI mAdhava enna
kAmAdi hagegaLa SikShisi
rakShisenna svAmi sirikRuShNa || 6 ||

AditALa

tApatrayaveMba dAvAnaladiMda
pApAtmara saMgaveMba viShavRukShadiMda
kApathaveMba bahu tappu gatigaLiMda
kOpaveMbaTTuva kALOragadiMda
I pariyali noMde BavATaviyalli
nI pAlisalu bEkennanu sirikRuShNa || 7 ||

jate

attitta sutti BavATaviyali noMde
itta bAreMdu ninna hattiliriso sirikRuShNa ||

Leave a Reply

Your email address will not be published. Required fields are marked *

You might also like

error: Content is protected !!