Namaste vimale komale

Composer : Shri Vadirajaru

By Smt.Shubhalakshmi Rao

ನಮಸ್ತೇ ವಿಮಲೆ ಕೋಮಲೆ ರಮಾದೇವಿ ||ಪ||

ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವ |
ಧರೆಯೊಳು ವರ್ಣಿಪ ಕವಿಯುದಾವ ||
ಸ್ವರಮಣನೆನಿಪ ರಮಣನ ಉರದೊಳು ಎಂದೆಂದು |
ಅರಮನೆಯ ಮಾಡಿ ಬಾಪುರೆ ಮೆರೆದವಳೆ ||೧||

ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ |
ನಿನ್ನ ತಾರುಣ್ಯ ಲಾವಣ್ಯಗಳನು ||
ಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ |
ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಸದನೆ ||೨||

ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು |
ಅನಂತಕರ ವಕ್ತ್ರನೇತ್ರಂಗಳನು ||
ಪೂರ್ಣ ಹಯವದನ ಕೈಗೊಂಡ ನಿನ್ನಯ ಗಂಡ |
ಸ್ವರ್ಣಸಮವರ್ಣೆ ಕರ್ಣಾಯತಾಕ್ಷಿ ||೩||


namastE vimale kOmale ramAdEvi ||pa||

taruNi SirOmaNi ninna SIla sauMdaryava |
dhareyoLu varNipa kaviyudAva ||
svaramaNanenipa ramaNana uradoLu eMdeMdu |
aramaneya mADi bApure meredavaLe ||1||

tanna maiyiMda makkaLa sRujisi yugayugadi |
ninna tAruNya lAvaNyagaLanu ||
mannisi poreva hariya paTTada ramaNi |
mAnye caitanye lAvaNye guNasadane ||2||

ninnaMgavappalu nODalu muKava cuMbisalu |
anaMtakara vaktranEtraMgaLanu ||
pUrNa hayavadana kaigoMDa ninnaya gaMDa |
svarNasamavarNe karNAyatAkShi ||3||

Leave a Reply

Your email address will not be published. Required fields are marked *

You might also like

error: Content is protected !!