Composer : Shri Vadirajaru
ಆವ ಕುಲವೋ ರಂಗಾ
ಅರಿಯಲಾಗದು |ಪ|
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ|ಅ.ಪ|
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ |೧|
ಗೊಲ್ಲತಿಯರ ಮನೆಯ ಪೊಕ್ಕು
ಕಳ್ಳತನವ ಮಾಡಿದನಂತೆ ||
ವಲ್ಲದ ಪೂತನೀ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖವ ಚೆಲ್ವನಂತೆ |೨|
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ
ಒಡೆಯ ಹಯವದನನಂತೆ |೩|
Ava kulavO raMgA
ariyalAgadu |pa|
Ava kulaveMdariyalAgadu
gOva kAyva gollanaMte
dEvalOkada pArijAtavu
hUva satige taMdanaMte|a.pa|
gOkuladalli huTTidanaMte
gOvugaLannu kAydanaMte ||
koLalanUdi mRugapakShigaLa
maraLu mADidanaMte
taraLatanadi varaLa negahi
marava muridu matte hAri
teredu bAyoLagirELu lOkava
irisi tAyige tOrdanaMte |1|
gollatiyara maneya pokku
kaLLatanava mADidanaMte ||
vallada pUtanI viShavanuMDu
mellane tRuNana koMdanaMte
pakShi tanna vAhanavaMte
hAvu tanna hAsigeyaMte
mukkaNNa tanna mommaganaMte
muddumuKava celvanaMte |2|
karaDi magaLa taMdanaMte
Saradhi magaLu maDadiyaMte ||
dharaNiyannu bEDidanaMte
IrELu lOkada oDeyanaMte
haDaginiMdali baMdanaMte
kaDaladaDeyali niMdanaMte
oDane madhvarigolidanaMte
oDeya hayavadananaMte |3|
Leave a Reply