Composer: Shri Gurugovinda dasaru
ವಿಕ್ರಮಾ – ಪಾಹಿ – ತ್ರಿವಿಕ್ರಮಾ ||ಪ||
ವಿಕ್ರಮ ನಮಿಪೆ ನಾ ನಿನ್ನ |
ನೀನು ಚಕ್ರವ ಪಿಡಿದೊಂದು ದಿನ್ನ |
ಆಹ! ನಕ್ರನುದ್ಧರಿಸಿದ |
ಪ್ರಕ್ರಿಯ ನಾನರಿತ್-ಉರುಕ್ರಮ ಶರಣೆಂಬೆ |
ವಕ್ರ ಮನವ ಕಳೆ ||ಅ.ಪ.||
ಪುಟ್ಟ ರೂಪವನೆ ತಾಳುತ್ತಾ |
ಬಲಿಯ ಇಷ್ಟಿಯೊಳವನ ಬೇಡುತ್ತಾ |
ದಾನ ಕೊಟ್ಟೆನೆಂದವನು ಪೇಳುತ್ತಾ |
ಬರೆ ಶಿಷ್ಟ ಶುಕ್ರನು ಬೇಡೆನ್ನುತ್ತಾ |
ಆಹ! ಕಟ್ಟಲು ಗಿಂಡೀಯ |
ದಿಟ್ಟ ಶುಕ್ರನ ಕಣ್ಣ ಪುಟ್ಟ ದರ್ಭೆಲಿ
ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ (೧)
ಥೋರ ರೂಪದೊಳು ಅಂಬರಾ |
ಹಬ್ಬಿ ಧಾರುಣಿ ಅಳೆದ ಗಂಭೀರ |
ಮತ್ತೆ ಮೂರನೇದಕೆ ಬಲಿಯ ಶಿರ |
ವತ್ತಿ ಭಾರಿ ಪಾತಾಳಕ್ಕೆ ಧೀರಾ |
ಆಹ! ಪೌರೋಚನಿಯನ್ವತ್ತಿ |
ದ್ವಾರವ ಕಾಯುತ್ತ ತೋರಿದೆ ಕರುಣವ |
ಭೂರಿ ದೈವರ ಗಂಡ (೨)
ಬ್ರಹ್ಮಾಂಡ ಖರ್ಪರ ಹರಿದೂ |
ಜಲ ಬ್ರಹ್ಮನ ಲೋಕಕೆ ಪರಿದೂ |
ಬರೆ ಬೊಮ್ಮ ತಾ ನಿನ ಪಾದ ತೊಳೆದೂ |
ಬೇಡೆ ಬ್ರಹ್ಮಾಂಡದೊಳು ತಾನು ಬಂದೂ |
ಆಹ! ಸುಮ್ಮನಸರ ಲೋಕ |
ಕ್ರಮ್ಮಿಸುತಲಿ ಬರುವ ಅಮ್ಮಹ ಗಂಗೆ ಪೆ |
ತ್ತೆಮ್ಮನುದ್ದರಿಸಿದಾ (೩)
ಬಾದರಾಯಣ ಬಳಿ ಭವ್ಯಾ |
ನಾಗಿಮೋದ ತೀರ್ಥರಿಂದ ಸೇವ್ಯಾ |
ನೀನು ವಾದಿರಾಜರಿಗೊಲಿದು ತ್ವರ್ಯಾ |
ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ |
ಆಹ!ಮೋದದಿ ನೆಲೆಸುತ್ತ |
ಕಾದುಕೊಂಡಿಹೆ ನಿನ್ನಪಾದವ ಪೊಗಳೂವ |
ಸಾದು ಸಂತತಿಯನ್ನ (೪)
ಹೀನ ಮಾನವನೆಂದು ಎನ್ನಾ |
ಉದಾಸೀನ ಮಾಡುವಿಯೇನೊ ಘನ್ನ |
ಕೇಳೊ ನೀನು ತ್ರೈಭುವದಿ ಪಾವನ್ನಾ |
ನೆಂದು ಗಾನದೋಳ್ ತವ ಪಾದವನ್ನಾ |
ಆಹ! ಆನಮಿಸುತ ಬಂದ |
ಮಾನವನೆನ್ನನು ದೀನನೆಂದೆನಿಸದೆ
ಜ್ಞಾನವ ನೀಡೆನಗೇ (೫)
ಪ್ರತಿ ಪ್ರತಿ ವತ್ಸರದೊಳು |
ಮಾಸ ಹತ್ತೆರಡು ಪೂರ್ಣಿಮದೊಳು |
ತವರಥದೊತ್ಸವ ಕಾರ್ಯಗಳೂ |
ಬಲುಹಿತದಿ ತವ ದಾಸರುಗಳೂ |
ಆಹ! ಅತಿ ವೈಭವದಿಂದ |
ವಿತರಣೆಯಿಂದಲಿ ಪ್ರತಿಯಿಲ್ಲವೆಂದೆನ್ನೆ |
ವಿಸ್ತರಿಸುವರಯ್ಯ (೬)
ಮರುದಿನದವಭೃತ ಸ್ನಾನಾ |
ಬಲು ನೆರೆದಿಹ ಸಾದು ಸಜ್ಜನಾ |
ಧವಳ ಸುರನದಿಯೊಳು ಗೈದು ನಿನ್ನಾ |
ಮಹಿಮೆ ಪರಿ ಪರಿ ಪೊಗಳುತ ಚೆನ್ನಾ |
ಆಹ! ಗುರು ಗೋವಿಂದ ವಿಠ್ಠಲ |
ಪರಮ ಪುರುಷನೆಂದು ನರ್ತನ
ಗೈಯುವ | ನರರೇನು ಧನ್ಯರೋ (೭)
vikramA – pAhi – trivikramA ||pa||
vikrama namipe nA ninna |
nInu cakrava piDidoMdu dinna |
Aha! nakranuddharisida |
prakriya nAnarit-urukrama SaraNeMbe |
vakra manava kaLe ||a.pa.||
puTTa rUpavane tALuttA |
baliya iShTiyoLavana bEDuttA |
dAna koTTeneMdavanu pELuttA |
bare SiShTa Sukranu bEDennuttA |
Aha! kaTTalu giMDIya |
diTTa Sukrana kaNNa puTTa darBeli
cucci meTTi niMteyo baliya (1)
thOra rUpadoLu aMbarA |
habbi dhAruNi aLeda gaMBIra |
matte mUranEdake baliya Sira |
vatti BAri pAtALakke dhIrA |
Aha! paurOcaniyanvatti |
dvArava kAyutta tOride karuNava |
BUri daivara gaMDa (2)
brahmAMDa Karpara haridU |
jala brahmana lOkake paridU |
bare bomma tA nina pAda toLedU |
bEDe brahmAMDadoLu tAnu baMdU |
Aha! summanasara lOka |
krammisutali baruva ammaha gaMge pe |
ttemmanuddarisidA (3)
bAdarAyaNa baLi BavyA |
nAgimOda tIrthariMda sEvyA |
nInu vAdirAjarigolidu tvaryA |
baMdusvAdi puradi niMdu stavyA |
Aha!mOdadi nelesutta |
kAdukoMDihe ninnapAdava pogaLUva |
sAdu saMtatiyanna (4)
hIna mAnavaneMdu ennA |
udAsIna mADuviyEno Ganna |
kELo nInu traiBuvadi pAvannA |
neMdu gAnadOL tava pAdavannA |
Aha! Anamisuta baMda |
mAnavanennanu dInaneMdenisade
j~jAnava nIDenagE (5)
prati prati vatsaradoLu |
mAsa hatteraDu pUrNimadoLu |
tavarathadotsava kAryagaLU |
baluhitadi tava dAsarugaLU |
Aha! ati vaiBavadiMda |
vitaraNeyiMdali pratiyillaveMdenne |
vistarisuvarayya (6)
marudinadavaBRuta snAnA |
balu nerediha sAdu sajjanA |
dhavaLa suranadiyoLu gaidu ninnA |
mahime pari pari pogaLuta cennA |
Aha! guru gOviMda viThThala |
parama puruShaneMdu nartana
gaiyuva | nararEnu dhanyarO (7)
Leave a Reply