Vara karnataka simhasana

Composer : Shri Vidyaprasanna Tirtharu on Shri Vyasarajaru

By Smt.Lakshmi

ವರ ಕರ್ನಾಟಕ ಸಿಂಹಾಸನ
ವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]
ದೊರೆಗಳು ಧರೆಯಲಿ ಉರುಳಿ ಉರುಳುತಿರೆ
ನಿರುತವು ದೊರೆ ಶ್ರೀ ವ್ಯಾಸರಜ |ಅ.ಪ|

ಬಾಲರೆ ಬನ್ನಿರಿ ದರುಶನ ಮಾಡಿರಿ,
ಬಾಲ ಬ್ರಹ್ಮಚಾರಿಗಳಿವರು,
ಉಭಯ ಸಾಮ್ರಾಜ್ಯಕೆ ಚಕ್ರವರ್ತಿಗಳು
ಅಭಯವನಿತ್ತರು ಜಗಕೆಲ್ಲ ||೧||

ವಿಜಯವ ಪಡೆದರು ವಾದಗಳಲಿ,
ಪ್ರತ್ಯರ್ಥಿ ಗಜಕೆ ಸರಿ ಎಂದೆನಿಸಿ |
ಸುಂದರ ಚರಣರು ಸುಜನ ಪಯೋನಿಧಿ
ಚಂದಿರನಂದದಿ ಹೊಳೆಯುವರು ||೨||

ಅಭಿಷೇಕವು ರತ್ನಗಳಿಂದಿವರಿಗೆ
ಅಭಿನವ ಪ್ರಹಲಾದರೆ ಇವರು,
ಗುಣಗಣ ನಿಲಯನ ಗುಣಗಳ
ತೋರಿದ ಮುನಿತ್ರಯದಲಿ ಸೇರಿದರಿವರು ||೩||

ಜ್ಞಾನಿಗಳಿಗೆ ದೊಡ್ಡ ಜ್ಞಾನ ಭಂಡಾರವು,
ನಾನಾ ಶಾಸ್ತ್ರಗಳರಿತವರು,
ಕುಹಯೋಗವ ಪರಿಹಾರವ ಮಾಡ್ದರು,
ಇಹ ಲೋಕದಿ ಸಮರ್ಯಾರಿಹರು ||೪||

ಚಂದ್ರಿಕ ನ್ಯಾಯಾಮೃತ ತರ್ಕ ತಾಣ್ಡವ,
ಯೆಂದಿಗು ಶ್ರೇಷ್ಟದ ಗ್ರಂಥಗಳು,
ಮುಂದಿಟ್ಟರು ಪರವಾದಿಗಳಿಗೆ
ಬಂದೊದಗಿತು ಗಂಟಳ ಗಾಣಗಳು ||೫||

ಕಟು ಶಾಸ್ತ್ರಗಳನು ಸ್ಫುಟದಿ ವಿವರಿಸೆ,
ಪುಟವಾಯಿತು ಈ ಜಗವೆಲ್ಲ,
ಪಟುತರ ಮತನಕ ಪುರಂದರ ಶಿಷ್ಯರು,
ಧಿಟ ತೋರಿದರಿವನುಗ್ರಹದಿ ||೬||

ಮಠಗಳೊಳುದ್ಧವ ಮಠವಿದು
ಇತರರರಿಗೆಟುಕದ ಕೀರ್ತಿಯ ಘಳಿಸಿಹುದು |
ವಾದಿರಾಜ ವಿಜಯೀಂದ್ರ ಪ್ರಮುಖರು
ಪರಮಾದರದಿ ಶಿರ ಬಾಗಿದರು ||೭||

ಓದಿದರೆಲ್ಲರು ಶಿಶ್ಯರೆನಿಸಿದರು,
ಪಾದರಾಜವ ಶಿರದಿ ಧರಿಸಿದರು,
ವಾಗ್ಮಿಗಳೆಲ್ಲರು ದಿಗ್ಮಿಗಳಾದರು
ವಾಗ್ಮಿ ವರೇಣ್ಯರ ಎದುರಿನಲಿ ||೮||

ರುಗ್ಮಿಣಿ ರಮಣನು ಕುಣಿದನು ನಲಿದನು
ಅಗ್ಗದಿ ಗುರುರಾಜರ ಮುಂದೆ,
ಪುಣ್ಯ ಶಾಲಿಗಳು ಆರಾಧಿಸುವ
ಪ್ರಸನ್ನ ಮಾನಸದಿ ನಡು ಗಟ್ಟಿ ||೯||


vara karnATaka siMhAsana
vecchaLiyade niMtitu I sthaLadi [pa]
doregaLu dhareyali uruLi uruLutire
nirutavu dore shrI vyAsaraja |a.pa|

bAlare banniri darushana mADiri,
bAla brahmachArigaLivaru,
ubhaya sAmrAjyake chakravartigaLu
abhayavanittaru jagakella ||1||

vijayava paDedaru vAdagaLali,
pratyarthi gajake sari eMdenisi |
suMdara charaNaru sujana payOnidhi
chaMdiranaMdadi hoLeyuvaru ||2||

abhiShEkavu ratnagaLiMdivarige
abhinava prahalAdare ivaru,
guNagaNa nilayana guNagaLa
tOrida munitrayadali sEridarivaru ||3||

j~jAnigaLige doDDa j~jAna bhaMDAravu,
nAnA shAstragaLaritavaru,
kuhayOgava parihArava mADdaru,
iha lOkadi samaryAriharu ||4||

chaMdrika nyAyAmRuta tarka tANDava,
yeMdigu shrEShTada graMthagaLu,
muMdiTTaru paravAdigaLige
baMdodagitu gaMTaLa gANagaLu ||5||

kaTu shAstragaLanu sphuTadi vivarise,
puTavAyitu I jagavella,
paTutara matanaka puraMdara shiShyaru,
dhiTa tOridarivanugrahadi ||6||

maThagaLoLuddhava maThavidu
itarararigeTukada kIrtiya ghaLisihudu |
vAdirAja vijayeeMdra pramukharu
paramAdaradi shira bAgidaru ||7||

Odidarellaru shishyarenisidaru,
pAdarAjava shiradi dharisidaru,
vAgmigaLellaru digmigaLAdaru
vAgmi varENyara edurinali ||8||

rugmiNi ramaNanu kuNidanu nalidanu
aggadi gururAjara muMde,
puNya shAligaLu ArAdhisuva
prasanna mAnasadi naDu gaTTi ||9||

Leave a Reply

Your email address will not be published. Required fields are marked *

You might also like

error: Content is protected !!