Gajamukhane Siddhidayakane

Composer : Shri Vyasarajaru

By Shri Anantharam Kalya

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ||ಪ||

ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಅ.ಪ||

ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತು
ಇಂದಿರೇಶನ ಪಾದ ಹೊಂದಿಪ್ಪ ತೆರದಿ
ಸುಂದರಾಂಗನೆ ಪದದ್ವಂದ್ವಕೆರಗುವೆ ನಿನ್ನ
ಸಂದೇಹ ಮಾಡದಲೆ ಇಂದು ಕರುಣಿಪುದು ||೧||

ಹರನ ತನಯನೆ ಕರುಣಾಕರನೆ ಸುರನರ ವರದ
ಮೊರೆಯ ಲಾಲಿಸಿ ಎನ್ನ ಕರಗಳನು ಪಿಡಿದು
ಮೊರೆಯ ಕೀರ್ತನೆ ಬಿಡೆನೊ ನೆರೆದೆ ನಿನ್ನಡಿಗಳನು
ತ್ವರೆಯದಿಂದಲಿ ನೋಡು ಶರಣೆಂಬೆ ನಿನಗೆ ||೨||

ಸಿದ್ಧಿದಾಯಕ ನಿನ್ನ ಪೊದ್ದಿ ಮೆರೆವೆನೊ ನಾನು
ಅಬ್ಧಿಶಯನನ ಮಹಿಮೆ ಬದ್ಧದಲಿ ಪೇಳ್ವ
ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ
ಮಧ್ವವಲ್ಲಭ ಸಿರಿಕೃಷ್ಣ ಗತಿಪ್ರಿಯನಾದ ||೩||


gajamuKane siddhidAyakane vaMdipe SaraNu ||pa||

trijaga vaMditanAda dEva dEvane SaraNu
sujanarige viGnavanu pariharipe SaraNu || a.pa||

maMda matiyanu biDisi caMda j~jAnavanittu
iMdirESana pAda hoMdippa teradi
suMdarAMgane padadvaMdvakeraguve ninna
saMdEha mADadale iMdu karuNipudu ||1||

harana tanayane karuNAkarane suranara varada
moreya lAlisi enna karagaLanu piDidu
moreya kIrtane biDeno nerede ninnaDigaLanu
tvareyadiMdali nODu SaraNeMbe ninage ||2||

siddhidAyaka ninna poddi mereveno nAnu
abdhiSayanana mahime baddhadali pELva
Suddhamatiyanu koTTu uddharisabEkenna
madhvavallaBa sirikRuShNa gatipriyanAda ||3||

Leave a Reply

Your email address will not be published. Required fields are marked *

You might also like

error: Content is protected !!