Ane bantidako

Composer : Shri Vadirajaru on Shri Vyasarajaru

By Shri Anantharam Kalya

ಆನೆ ಬಂತ್ತಿದಕೋ ವ್ಯಾಸರಾಜರೆಂಬೊ ಆನೆ ಬಂತ್ತಿದಕೋ |

ಹದಮೀರಿ ಮದವೇರಿ ಮದನಾರಿ ತಾನೆಂಬ
ಅಧಮರ ಎದೆಮೆಟ್ಟಿ ವದೆದು ಮತಿಸುತಲಿ | ಅ.ಪ |

ಮರುತಮತ ನಿರಂತರ ಚರಣದ ಧೂಳಿ
ಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ |

ಜಗತ್ ಕರ್ತ ನಾನೆಂದು ಬೊಗಳಿಕೊಂಬುವ ಮಾ-
ಯಿಗಳ ಮುಖದ ಮೇಲೆ ಮುಗಿ ಮುಗಿ ಮುಗಿ ಉಗುಳುತ್ತ | ೨ |

ಇದ್ದ ಜಗವಿಲ್ಲೆಂಬ ಶುದ್ಧ ಮೂರ್ಖತೆಯುಳ್ಳ
ಅದ್ವೈತಿಗಳ ಮನ ಮಡುವನ್ನು ಕಲಕುತ್ತ | ೩ |

ಮಧ್ವಮುನೀಂದ್ರರ ಶುದ್ಧತೀರ್ಥದಿ ಮಿಂದು
ತಿದ್ದಿದ ಸಿರಿ ನಾಮ ಮುದ್ರೆ ಶೃಂಗಾರದಲ್ಲಿ | ೪ |

ಮುರಿಯಲು ಗರುವವೆಂಬೊ ವರಕದಳಿಯ
ಸಿರಿಹಯವದನನ ಅರಮನೆಯಿಂದ ಪಟ್ಟದ | ೫ |


Ane baMttidakO – vyAsarAjareMbo Ane baMttidakO |

hadamIri madavEri madanAri tAneMba
adhamara edemeTTi vadedu matisutali | a.pa |

marutamata niraMtara caraNada dhULi
karadali piDidu Sirada mEle celluta | 1 |

jagat karta nAneMdu bogaLikoMbuva mA-
yigaLa mukhada mEle mugi mugi mugi uguLutta | 2 |

idda jagavilleMba Suddha mUrKateyuLLa
advaitigaLa mana maDuvannu kalakutta | 3 |

madhvamunIMdrara SuddhatIrthadi miMdu
tiddida siri nAma mudre SRuMgAradalli | 4 |

muriyalu garuvaveMbo varakadaLiya
sirihayavadanana aramaneyiMda paTTada | 5 |

Leave a Reply

Your email address will not be published. Required fields are marked *

You might also like

error: Content is protected !!