Composer : Shri Gopalakrishna vittala [Amba bai]
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ಕಂಡು ನಮಿಸಿದೆ ಸತ್ಯಬೋಧ ಮುನಿಯ
ಮಂಡೆ ಬಾಗುತ ದೇಹ ದಂಡವಿಕ್ಕುತಲಿ (ಪ.)
ಭವ್ಯ ಬೃಂದಾವನದಿ ವೈಭವದಿ ಮೆರೆವವರ
ಸವ್ಯಸಾಚಿಯ ಸಖನ ಪ್ರಿಯ ಪಾತ್ರರ
ದಿವ್ಯ ಕೂರ್ಮಾಸನದಿ ಕುಳಿತು ತಪಚರಿಸುವರ
ಅವ್ಯಯಾತ್ಮನ ಚರಣ ಧ್ಯಾನ ಮಾಳ್ಪವರ [೧]
ವಿಷವಿಡಲು ಪಾಪಿಗಳು ರಾಮಗರ್ಪಿಸಿ ಭುಜಿಸೆ
ನಿಶಿಯಲ್ಲಿ ನಿದ್ರೆ ಜೈಸುತ ನಿತ್ಯದಲಿ
ಹಸನಾಗಿ ದೇವತಾರ್ಚನೆ ಭೋಜನವಗೈಯೆ
ದೂಷಿಸಿದ ಕುಜನರಿಗೆ ರಾತ್ರೆ ಸೂರ್ಯನ ತೋರ್ದ [೨]
ಕಾಶಿಗ್ಹೋಗುವೆನೆಂಬ ಆಸೆ ಪೂರೈಸುವೊಡೆ
ತಾ ಸ್ವಪ್ನದಲಿ ಬಂದು ಜಾಹ್ನವಿಯು ಪೇಳೆ
ರಸರಹಿತವಾದ ವೃಕ್ಷದಿ ಗಂಗೆಯನೆ ತರಿಸಿ
ತಾ ಸ್ನಾನಗೈದು ಭಾಗೀರಥಿಯ ಪೂಜಿಸಿದ [೩]
ಪೇಳಲಳವಲ್ಲದಿಹ ಬಹಳ ಕೌತುಕ ಮಹಿಮೆ
ಕಾಲಕಾಲಕೆ ತೋರಿ ಭಕ್ತರನು ಕಾಯ್ದು
ಮೇಲಾದ ಮಧ್ವ ಶಾಸ್ತ್ರಾರ್ಣವದಿ ಈಜುತಲಿ
ಲೀಲೆಯಿಂದಲಿ ಮಾಯ್ಗಳನೆ ಗೆದ್ದ ಮಹಿಮ [೪]
ಪ್ರತಿವರ್ಷ ಪಾಲ್ಗುಣದಿ ದ್ವಿತೀಯ ಪಕ್ಷದಿ
ದ್ವಿತೀಯ ತಿಥಿಯಲ್ಲಿ ದಿವ್ಯ ಉತ್ಸವ ಕೊಳುತ
ಸತತ ಈ ಸವಣೂರು ಕ್ಷೇತ್ರದಲಿ ನೆಲಸುತಲಿ
ಚ್ಯುತರಹಿತ ಗೋಪಾಲಕೃಷ್ಣವಿಠ್ಠಲನ ಭಜಿಪೆ [೫]
kaMDu namiside satyabOdha muniya
maMDe bAguta dEha daMDavikkutali (pa.)
Bavya bRuMdAvanadi vaiBavadi merevavara
savyasAciya saKana priya pAtrara
divya kUrmAsanadi kuLitu tapacarisuvara
avyayAtmana caraNa dhyAna mALpavara [1]
viShaviDalu pApigaLu rAmagarpisi Bujise
niSiyalli nidre jaisuta nityadali
hasanAgi dEvatArcane BOjanavagaiye
dUShisida kujanarige rAtre sUryana tOrda [2]
kASig~hOguveneMba Ase pUraisuvoDe
tA svapnadali baMdu jAhnaviyu pELe
rasarahitavAda vRukShadi gaMgeyane tarisi
tA snAnagaidu BAgIrathiya pUjisida [3]
pELalaLavalladiha bahaLa kautuka mahime
kAlakAlake tOri Baktaranu kAydu
mElAda madhva SAstrArNavadi Ijutali
lIleyiMdali mAygaLane gedda mahima [4]
prativarSha pAlguNadi dvitIya pakShadi
dvitIya tithiyalli divya utsava koLuta
satata I savaNUru kShEtradali nelasutali
cyutarahita gOpAlakRuShNaviThThalana Bajipe [5]
Leave a Reply