Sharanu hokkenu ninna

Composer : Shri Hanumesha dasaru

By Smt.Shubhalakshmi Rao

Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur


ಶರಣು ಹೊಕ್ಕೆನು ನಿನ್ನ ಚರಣ ಕಮಲಕ್ಕೆ ನಾ
ಗುರು ಸತ್ಯಬೋಧರಾಯಾ
ಕರುಣಿಗಳರಸನೆ ತರಳನ ಮೊರೆ ಕೇಳಿ
ಪೊರೆವುದು ಎನ್ನ ಜೀಯಾ ಗುರುರಾಯ [ಪ]

ಬೇಡಿಕೊಳ್ಳಲು ಬಾಯಿಬಾರದೋ ನಾ ಹಿಂದೆ
ಮಾಡಿದಪರಾಧವ
ನೋಡದೆ ಎನ್ನವಗುಣ ಕೈಯಪಿಡಿದು
ಕಾಪಾಡಲು ನಿನಗೀಡೆ ದಯಮಾಡೆ [೧]

ಪುಟ್ಟದ ಪುಟಕ್ಕಿಕ್ಕಿದ ಚಿನ್ನದಂತಿಹ
ಶ್ರೇಷ್ಠ ವೈಷ್ಣವ ಕುಲದಿ
ಭ್ರಷ್ಟ ಮಾಡಿದೆ ಬಾಳು ಪೇಳಲೇನು
ದಯ ದೃಷ್ಟಿ ಇಡುವುದೆನ್ನೊಳು ದಯಾಳು [೨]

ಮರುತ ಮತವ ನಂಬಿ ನಡೆವರ
ಪದಧೂಳಿ ಧರಿಸುವ ಭಾಗ್ಯವನೇ
ಗುರುವರ್ಯ ಕರುಣಿಸು ಹನುಮಯ್ಯನ
ಪಾದ ಸರಸಿಜ ಭೃಂಗ ನೀನು ಸುರಧೇನು [೩]


SaraNu hokkenu ninna caraNa kamalakke nA
guru satyabOdharAyA
karuNigaLarasane taraLana more kELi
porevudu enna jIyA gururAya [pa]

bEDikoLLalu bAyibAradO nA hiMde
mADidaparAdhava
nODade ennavaguNa kaiyapiDidu
kApADalu ninagIDe dayamADe [1]

puTTada puTakkikkida cinnadaMtiha
SrEShTha vaiShNava kuladi
BraShTa mADide bALu pELalEnu
daya dRuShTi iDuvudennoLu dayALu [2]

maruta matava naMbi naDevara
padadhULi dharisuva BAgyavanE
guruvarya karuNisu hanumayyana
pAda sarasija BRuMga nInu suradhEnu [3]

Leave a Reply

Your email address will not be published. Required fields are marked *

You might also like

error: Content is protected !!