Composer : Shri Shyamasundara dasaru
ರಾಘವೇಂದ್ರ ಗುರುರಾಯ | ಶುಭಕಾಯ ಕವಿಗೇಯ
ಪಿಡಿಕೈಯ್ಯ || ಪ ||
ಪ್ರಥಮ ಯುಗದಿ ಶ್ರೀಪತಿಯ ಸ್ತಂಭದೊಳು |
ಪಿತನಿಗೆ ತ್ವರ ತೋರಿಸಿದ |
ಪ್ರಹ್ಲಾದ ಶ್ರೀಪಾದ ಕೊಡು ಮೋದ || ೧ ||
ತುಂಗಭದ್ರ ಸುತರಂಗಿಣಿ ತೀರದಿ |
ಕಂಗೊಳಿಸುವ ಯತಿನಾಥ |
ದ್ವಿಜವ್ರಾತ ನುತದಾತ ಪ್ರಖ್ಯಾತ || ೨ ||
ಕಾಮಧೇನು ಸಮ ಕಾಮಿತಕಾಯಕ |
ಶ್ಯಾಮಸುಂದರನದಾಸ |
ಅಘ ನಾಶ ನತ ಪೋಷ ಮುನಿ ವ್ಯಾಸ || ೩||
rAGavEMdra gururAya | SuBakAya kavigEya
piDikaiyya || pa ||
prathama yugadi SrIpatiya staMBadoLu |
pitanige tvara tOrisida |
prahlAda SrIpAda koDu mOda || 1 ||
tuMgaBadra sutaraMgiNi tIradi |
kaMgoLisuva yatinAtha |
dvijavrAta nutadAta praKyAta || 2 ||
kAmadhEnu sama kAmitakAyaka |
SyAmasuMdaranadAsa |
aGa nASa nata pOSha muni vyAsa || 3||
Leave a Reply