Composer : Shri Gurugovinda dasaru
ಗುರುವೇ ವರಹಜ ತಟ ವಾಸಾ
ಪುರಿ ಮಂತ್ರಾಧೀಶ |ಪ|
ಅರುಮೊರೆ ಇಡುವೆನೋ ವರಪದ ಪದುಮಕೆ
ಕರುಣದಲೆನ್ನ ಮನ ಹರಿಯಲ್ಲಿ ಇರಿಸೋ ||ಅ.ಪ||
ಬಾಗಿ ಭಜಿಪೇ ಗುರುವೇ
ಎನ್ನಯ ರೋಗ ಹರಿಸು ಪ್ರಭುವೇ
ರಾಘವೇಂದ್ರ ದುರಿತೌಘ ವಿದೂರನೇ
ಭೋಗಿಶಯನ ಪದ ರಾಗದಿ ಭಜಿಸುವ ||೧||
ಭೂತ ಪ್ರೇತ ಬಾಧೆ
ಬಿಡಿಸುವ ಖ್ಯಾತಿ ನಿಮ್ಮದು ತಿಳಿದೆ
ದೂತರೆನಿಪ ಜನ ಆತು ನಿಮ್ಮಪದ
ಪ್ರೀತಿ ಸೇವೆಯಲಿ ಕಾತುರರಿಹರೋ ||೨||
ಮೌನಿ ವರ್ಯ ನಿನ್ನ
ಬೇಡುವೆ ಜ್ಞಾನ ಭಕುತಿಯನ್ನ
ದಾನ ಮಾಡಿ ಅಜ್ಞಾನವ ಓಡಿಸೋ
ಹೀನ ಯೋನಿ ಬರಲೇನು ಅಂಜೆನೋ ||೩||
ಪರಿಮಳಾರ್ಯರೆಂದು
ನಿಮ್ಮಯ ಬಿರುದು ಕೇಳಿ ಬಂದು
ಮೊರಯನಿಡುವೆ ತವ ಚರಣಾಂಬುರುಹಕೆ
ಅರಿವನೀಯೋ ತವ ಪರಿಮಳ ಸೊಬಗನು ||೪||
ಗುರು ಸುಧೀಂದ್ರ ಕರಜ
ತೋರ್ಪುದು ಹರಿಯ ಪಾದ ಬಿಸಜ
ವರಸುಹೃದ್ಗ ಗುರು ಗೋವಿಂದ ವಿಠಲನ
ಚರಣ ಸರೋಜವ ನಿರುತ ಭಜಿಪ ಗುರು ||೫||
guruvE varahaja taTa vAsA
puri maMtrAdhIsha |pa|
arumore iDuvenO varapada padumake
karuNadalenna mana hariyalli irisO ||a.pa||
bAgi bhajipE guruvE
ennaya rOga harisu prabhuvE
rAghavEMdra duritaugha vidUranE
bhOgishayana pada rAgadi bhajisuva ||1||
bhUta prEta bAdhe
biDisuva khyAti nimmadu tiLide
dUtarenipa jana Atu nimmapada
prIti sEveyali kAturariharO ||2||
mouni varya ninna
bEDuve j~jAna bhakutiyanna
dAna mADi aj~jAnava ODisO
hIna yOni baralEnu aMjenO ||3||
parimaLAryareMdu
nimmaya birudu kELi baMdu
morayaniDuve tava charaNAMburuhake
arivanIyO tava parimaLa sobaganu ||4||
guru sudhIMdra karaja
tOrpudu hariya pAda bisaja
varasuhRudga guru gOviMda viThalana
charaNa sarOjava niruta bhajipa guru ||5||
Leave a Reply