Elu Shri Gururaya

Composer : Shri Prasannavenkata dasaru

By Smt.Shubhalakshmi Rao

ಏಳು ಶ್ರೀ ಗುರುರಾಯ ಬೆಳಗಾಯಿತಿಂದು
ಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ [ಪ.]

ಏಳು ಗುರು ರಾಘವೇಂದ್ರ ಏಳು ದಯಾಗುಣ ಸಾಂದ್ರ
ಏಳು ವೈಷ್ಣವ ಕುಮುದಕೆ ಚಂದ್ರ ಶ್ರೀ ರಾಘವೇಂದ್ರ [ಅ.ಪ]

ಅಶನ ವಸನಗಳಿಲ್ಲವೆಂಬ ವ್ಯಸನಗಳಿಲ್ಲ
ಮುಸುಕ್~ ಹಾಕಿ ಮೋಸದಲೆ ಮೋಹಿಸಿದೆನೆಲ್ಲ
ಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹ
ವಸುಮತಿಯೊಳು ಬಹಳ್ ಹಸಗೆಟ್ಟಿತಲ್ಲ (೧)

ನಾನು ನನ್ನದು ಎಂದು ಹೀನಮನಸಿಗೆ ತಂದು
ಏನು ಮಾಡುವ ಕರ್ಮ ನಾನೆ ಅಹುದೆಂದು
ಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೆಂದು
ನೀನೆ ಉದ್ಧರಿಸಯ್ಯ ದೀನ ದಯಾಸಿಂಧು (೨)

ಅನ್ಯರ ಕೈಯಲ್ಲಿ ನಿನ್ನವರನಿರಿಸುವುದು
ಅನ್ಯಾಯವಾಯ್ತು ಪಾವನ್ನ ಗುರುರಾಯ
ಎನ್ನ ಮಾತಲ್ಲವಿದು ನಿನ್ನ ಮಾತೇ ಸರಿ
ಮನ್ನಿಸಿ ಸಲಹು ಪ್ರಸನ್ನ ಗುರುರಾಯ (೩)

ಆಶೆಗೊಳಗಾದೆನೊ ಹೇಸಿ ಮನುಜನು ನಾನು
ಕ್ಲೇಶ ಭವ ಸಾಗರದೊಳಗೀಸುತಿಹೆನೊ
ಏಸು ಜನ್ಮದಿ ಎನ್ನ ಘಾಸಿ ಮಾಡಿದಿ ಮುನ್ನ
ದಾಸನಾಗುವೆ ತೋರೊ ಪ್ರಸನ್ನವೆಂಕಟನ (೪)


ELu SrI gururAya beLagAyitiMdu
dhULi daruSana koDiri I vELe SiShyarige [pa.]

ELu guru rAGavEMdra ELu dayAguNa sAMdra
ELu vaiShNava kumudake caMdra SrI rAGavEMdra [a.pa]

aSana vasanagaLillaveMba vyasanagaLilla
musuk~ hAki mOsadale mOhisidenella
asurAriya smarisade paSuvinolu I dEha
vasumatiyoLu bahaL hasageTTitalla (1)

nAnu nannadu eMdu hInamanasige taMdu
Enu mADuva karma nAne ahudeMdu
svAmi kartRutvavanu tiLiyalilla nAneMdu
nIne uddharisayya dIna dayAsiMdhu (2)

anyara kaiyalli ninnavaranirisuvudu
anyAyavAytu pAvanna gururAya
enna mAtallavidu ninna mAtE sari
mannisi salahu prasanna gururAya (3)

ASegoLagAdeno hEsi manujanu nAnu
klESa Bava sAgaradoLagIsutiheno
Esu janmadi enna GAsi mADidi munna
dAsanAguve tOro prasannaveMkaTana (4)

Leave a Reply

Your email address will not be published. Required fields are marked *

You might also like

error: Content is protected !!