Composer : Shri Hanumesha Vittala
ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು
ವರ ಮಂತ್ರಾಲಯದೊಳಿರುವುದುಚಿತವೇನೋ [ಪ]
ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ
ದಡದಿನಿಂತೆನ್ನ ಕೈ ಬಿಡುವುದುಚಿತವೇನೋ [೧]
ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ
ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ [೨]
ಒಡೆಯ ಶ್ರೀ ಹನುಮೇಶವಿಠ್ಠಲನ ದಾಸನೇ
ಬಡವನಿರುವೆನೆಂದು ನೋಡದಿರುವರೇನೊ [೩]
gururAjanE enna paripAlipuda biTTu
vara maMtrAlayadoLiruvuducitavEnO [pa]
baDa Baktananu kaShTa kaDaloLirisi tuMgA
daDadiniMtenna kai biDuvuducitavEnO [1]
aDi sEvakanoLiMthA kaDu kOpavyAtakO
nuDi nuDigenna tappu hiDidu pOguvarEno [2]
oDeya SrI hanumESaviThThalana dAsanE
baDavaniruveneMdu nODadiruvarEno [3]
Leave a Reply