Composer : Shri Krishna vittala
ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು [ಪ]
ಭ್ರಾಂತಿಯನೀಗಿಸಿ ಶಾಂತಿಯನೀಡುತ
ಚಿಂತೆಯ ಹರಿಸುತ ಕಂತುಪಿತನ ದಾಸ
ಸಂತರಭೀಷ್ಟರ ನಿರಂತರ ಸಲಿಸುವ
ಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ (೧)
ಅರ್ತಿಯಿಂದಲಿ ತನ್ನ ಪ್ರಾರ್ಥನೆ ಗೈಯ್ಯುವ
ಆರ್ತರಾದವರ ಇಷ್ಟಾರ್ಥವ ಸಲಿಸುತ
ಆರ್ತರಕ್ಷಕ ನಮ್ಮ ಗುರು ರಾಘವೇಂದ್ರರ
ಕೀರ್ತಿಯ ಪಾಡುತ ಪ್ರಾರ್ಥನೆಗೈವುದು (೨)
ಕರುಣಾಮೃತದ ಧಾರೆಯ ಹರಿಸುತ
ಶರಣರ ಪೊರೆಯುವ ಪರಮ ದಯಾಕರ
ಕರುಣಾಭರಣ ಶ್ರೀಕೃಷ್ಣವಿಠಲನ
ಚರಣ ಸೇವೆಯ ಮಾಳ್ಪ ರಾಘವೇಂದ್ರರ ಭಜನೆ (೩)
Bakutana BAgyavidu gururAjara pUjipudu [pa]
BrAMtiyanIgisi SAMtiyanIDuta
ciMteya harisuta kaMtupitana dAsa
saMtaraBIShTara niraMtara salisuva
SAMtamUruti namma rAGavEMdrara pUje (1)
artiyiMdali tanna prArthane gaiyyuva
ArtarAdavara iShTArthava salisuta
ArtarakShaka namma guru rAGavEMdrara
kIrtiya pADuta prArthanegaivudu (2)
karuNAmRutada dhAreya harisuta
SaraNara poreyuva parama dayAkara
karuNABaraNa SrIkRuShNaviThalana
caraNa sEveya mALpa rAGavEMdrara Bajane (3)
Leave a Reply