Raghavendra gururayara sevisiro

Composer : Shri Shrida vittala dasaru

ರಾಘವೆಂದ್ರ ಗುರುರಾಯರ ಸೇವಿಸಿರೊ,
ಸೌಖ್ಯದಿ ಜೀವಿಸಿರೊ [ಪ]

ತುಂಗಾತೀರದಿ ರಘುರಾಮನ ಪೂಜಿಪರೊ,
ನರಸಿಂಘನ ಭಜಕರೋ [ಅ.ಪ]

ಶ್ರೀ ಸುಧೀಂದ್ರ ಕರ ಸರೋಜ ಸಂಜಾತಾ
ಜಗದೊಳಗೆ ಪುನೀತಾ
ದಾಶರತಿಯ ದಾಸತ್ವವ ತಾ ವಹಿಸಿ,
ದುರ್ಮತಿಗಲ ಜಯಿಸಿ
ಏಅ ಸಮೀರ ಮತ ಸಂಸ್ತಾಪಕರಾಗಿ,
ನಿಂದಕರನು ನೀಗಿ
ಭೂಸುರರಿಗೆ ಸಮ್ಸೇವ್ಯ ಸದಾಚರಣೀ,
ಕಂಗೋಲಿಸುವ ಕರುಣಿ [೧]

ಕುಂದದೆ ವರ ಮಂತ್ರಾಲಯದಲ್ಲಿರುವ
ಕರೆದಲ್ಲಿಗೆ ಬರುವ
ಬೃಂದವನಗತ ಮೃತ್ತಿಕೆ ಜಲಪಾನ
ಮುಕುತಿಗೆ ಸೋಪಾನ,
ಸಂದರುಶನ ಮಾತ್ರದಲಿ ಮಹತ್ಪಾಪ
ಬಡೆದೋಡಿಸಲಾಪ
ಮಂದ ಭಾಗ್ಯರಿಗೆ ದೊರಕದಿವರ ಸೇವ,
ಶರಣರ ಸಂಜೀವಾ [೨]

ಶ್ರೀದ ವಿಠ್ಠಲನ ಸನ್ನಿಧಾನ ಪಾತ್ರ
ಸಂಸ್ತುತಿಸಲು ಮಾತ್ರ,
ಮೋದ ಪಡಿಸುತಿಹ ತಾನಿಹಪರದಲ್ಲಿ
ಈತಗೆ ಸರಿಯೆಲ್ಲಿ
ಮೇದಿನಿಯೊಳಗೆ ಇನ್ನರಸಲು ನಾ ಕಾಣೆ
ಪುಸಿಯಲ್ಲಯ ಎನ್ಣಾಣೆ
ಪಾದ ಸ್ಮರಣೆಯ ಮಾಡದವನೆ ಪಾಪಿ,
ನಾ ಪೇಳ್ವೆನು ಸ್ಥಾಪಿ [೩]


rAGaveMdra gururAyara sEvisiro,
sauKyadi jIvisiro [pa]

tuMgAteeradi raghurAmana pUjiparo,
narasiMghana bhajakarO [a.pa]

SrI sudhIMdra kara sarOja saMjAtA
jagadoLage punItA
dASaratiya dAsatvava tA vahisi,
durmatigala jayisi
Ea samIra mata saMstApakarAgi,
niMdakaranu nIgi
bhoosurarige samsEvya sadAcaraNI,
kaMgOlisuva karuNi [1]

kuMdade vara maMtrAlayadalliruva
karedallige baruva
bRuMdavanagata mRuttike jalapAna
mukutige sOpAna,
saMdaruSana mAtradali mahatpApa
baDedODisalApa
maMda BAgyarige dorakadivara sEva,
SaraNara saMjIvA [2]

SrIda viThThalana sannidhAna pAtra
saMstutisalu mAtra,
mOda paDisutiha tAnihaparadalli
Itage sariyelli
mEdiniyoLage innarasalu nA kANe
pusiyallaya enNANe
pAda smaraNeya mADadavane pApi,
nA pELvenu sthApi [3]

Leave a Reply

Your email address will not be published. Required fields are marked *

You might also like

error: Content is protected !!