Composer : Shri Abhinava Janardana vittala
ತುಂಗಾ ತೀರದಿ ನಿಂತ ಸು-ಯತಿವರನ್ಯಾರೆ ಪೆಳಮ್ಮಯ್ಯ |
ಸಂಗೀತ-ಪ್ರಿಯ ಮಂಗಳ ಸುಗುಣಿ ತರಂಗ ಮುನಿ ಕುಲೋತುಂಗ
ಕಾಣಮ್ಮ ||ಅ.ಪ.||
ಚೆಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜ ಮಣಿಯು ಕೊರಳೊಲು ತುಲಸಿ ಮಾಲೆಗಳು ಪೇಳಮ್ಮಯ್ಯ
ಸುಲಲಿತ ಕಮಣ್ಡಲ ದಂಡವನ್ನೆ ಧರಿಸಿಹನೆ ಪೇಳಮ್ಮಯ್ಯ
ಕ್ಷುಲ್ಲ ಹಿರಣ್ಯಕನಲ್ಲಿ ಜನಸಿದಾ ಪ್ರಹಾಲದನು ತಾನಿಲ್ಲಿಹನಮ್ಮ (೧)
ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯ
ವಂದಿಸಿ ಸ್ತುತಿಸುವ ಭೂಸುರರು ಬಲುವೃನ್ದ ಪೇಳಮ್ಮಯ್ಯ
ಚನ್ದದಲಂಕೃತಿ ಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿಂದೆ ವ್ಯಾಸ ಮುನಿಯೆಂದೆನಿಸಿದ ಕರ್ಮಂದಿಗಲರಸಘದಿಂದ
ರಹಿತನೇ (೨)
ಅಭಿನವ ಜನಾರ್ಧನ ವಿಠಲನ ಧ್ಯಾನಿಸುವಾ ಪೇಳಮ್ಮಯ್ಯ
ಅಭಿವಂದಿಪರಿಗೆ ಅಖಿಲಾರ್ಥವ ಸಲ್ಲಿಸುವ ಪೇಳಮ್ಮಯ್ಯ
ನಭ ಮಣಿಯಂದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭ ಗುಣ ನಿಧಿ ಶ್ರೀ ರಾಘವೇಂದ್ರ ಯತಿ ಅಭುಜ ಭವಾಣ್ಡದೊಳು
ಪ್ರಭಲ ಕಾಣಮ್ಮ (೩)
tuMgA tIradi niMta su-yativaranyAre peLammayya |
saMgIta-priya maMgaLa suguNi taraMga muni kulOtuMga
kANamma ||a.pa.||
celuva sumuKa PaNiyalli tilaka nAmagaLu pELammayya
jalaja maNiyu koraLolu tulasi mAlegaLu pELammayya
sulalita kamaNDala daMDavanne dharisihane pELammayya
kShulla hiraNyakanalli janasidA prahAladanu tAnillihanamma (1)
suMdara caraNaraviMda suBakutiyaliMda pELammayya
vaMdisi stutisuva BUsuraru baluvRunda pELammayya
candadalaMkRuti yiMda SOBisuva AnaMda pELammayya
hiMde vyAsa muniyeMdenisida karmaMdigalarasaGadiMda
rahitanE (2)
aBinava janArdhana viThalana dhyAnisuvA pELammayya
aBivaMdiparige aKilArthava sallisuva pELammayya
naBa maNiyaMdadi BUmiyalli rAjisuva pELammayya
SuBa guNa nidhi SrI rAGavEMdra yati aBuja BavANDadoLu
praBala kANamma (3)
Leave a Reply