Kuniyuta naliyuta baa

Composer : Shri Raja S Gururajacharya (Kamalesha ankita)

By Smt.Shubhalakshmi Rao

ಕುಣಿಯುತ ನಲಿಯುತ ಬಾ ಶಂಕರ |
ಮಣಿಯುವೆ ನಿನ್ನಡಿಗೆರಗುವೆ ಮುರಹರ ||ಪ||

ಢಮಢಮಢಮ ಎಂದು ಡಮರುಗ ದ್ವಾನಿಸಲು |
ಠಣಠಣಠಣ ಎಂದು ವೃಷಭವು ನಲಿಯೇ |
ಝಣ ತಕ ತಕ ಝಣ ತಾಕಿಟ ತಕ ಕಿಟ |
ಝಣ ಎಂದು ನಂದಿ ಮೃದಂಗವ ಬಾರಿಸಲು ||೧||

ಹರ ಹರ ಹರ ಎಂದು ಗಣಗಳು ತುತಿಸೆ |
ಪೊರೆಯಂದಹಿವಿದು ಗಂಗೆಯು ನಮಿಸೆ |
ಸರಿಗಮಪದನಿಸ ಸ್ವರಗಳ ಪಾಡುತ |
ನಾರದ ತುಂಬುರ ಗಾನವ ಪಾಡಲು ||೨||

ವರಕಮಲೆಶನ ಚರಿತೆಯ ಜಗದೊಳು |
ಪರಿಪರಿ ಭಾವದಿ ನರ್ತಿಸಿ ತೋರುತ |
ಪೊರೆಯುತ ಭಕುತರ ವರವೀಯುತ ಬಾ |
ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||


kuNiyuta naliyuta bA SaMkara |
maNiyuve ninnaDigeraguve murahara ||pa||

DhamaDhamaDhama eMdu Damaruga dvAnisalu |
ThaNaThaNaThaNa eMdu vRuShaBavu naliyE |
JaNa taka taka JaNa tAkiTa taka kiTa |
JaNa eMdu naMdi mRudaMgava bArisalu ||1||

hara hara hara eMdu gaNagaLu tutise |
poreyaMdahividu gaMgeyu namise |
sarigamapadanisa svaragaLa pADuta |
nArada tuMbura gAnava pADalu ||2||

varakamaleSana cariteya jagadoLu |
paripari BAvadi nartisi tOruta |
poreyuta Bakutara varavIyuta bA |
girijAliMgita nATyAcArya ||3||

Leave a Reply

Your email address will not be published. Required fields are marked *

You might also like

error: Content is protected !!