Composer : Shri Vadirajaru
ನಲಿವ ಬೆಣ್ಣೆಯನು ಮೆಲುವ ಕೃಷ್ಣ
ನಮ-ಗೊಲಿವ ಖಳರನ್ನೆ ಕೊಲುವ [ಪ.]
ನಗವ ಕರದಿಂದ ನೆಗೆವ ಅದರೊಳಗೆ
ಪೋಗುವ ನರರ ಕಂಡು ನಗುವ (೧)
ಕಡೆವ ಕೋಲನ್ನು ಪಿಡಿವ ಭೂಷಣವ
ತೊಡುವ ಪಟ್ಟೆಗಳನುಡುವ (೨)
ಬಡವರಭೀಷ್ಟಗಳ ಕೊಡುವ
ದುರಿತಗಳ ಜಡಿವ ದೈತ್ಯರನು ಬಡಿವ (೩)
ಶರಣ ನಾಯಕನ ಚರಣ ದ್ವಯಕೆ
ಪುರಹರನ ಮಸ್ತಕಾಭರಣ (೪)
ಶರಣ ಜನರ ಹಿತಕರಣ ಹಯವದನ
ಸ್ಮರಣ ಭವಕೆ ಸಂಹರಣ (೫)
naliva beNNeyanu meluva kRuShNa
nama-goliva KaLaranne koluva [pa.]
nagava karadiMda negeva adaroLage
pOguva narara kaMDu naguva (1)
kaDeva kOlannu piDiva BUShaNava
toDuva paTTegaLanuDuva (2)
baDavaraBIShTagaLa koDuva
duritagaLa jaDiva daityaranu baDiva (3)
SaraNa nAyakana caraNa dvayake
puraharana mastakABaraNa (4)
SaraNa janara hitakaraNa hayavadana
smaraNa Bavake saMharaNa (5)
Leave a Reply