Composer : Shri Gurugovinda dasaru
ವಿಷ್ಣುತೀರ್ಥರ ಪಾದ | ನಿಷ್ಠೆಯಿಂದಲಿ ಭಜಿಸೆ |
ಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ || ಪ ||
ಜಿಷ್ಣುಸಖ ಶ್ರೀ ಕೃಷ್ಣ ಭಕುತರು
ಶ್ರೇಷ್ಠ ದಂಪತಿ ಗರ್ಭಜಾತರು
ಸುಷ್ಠು ಜಯಮುನಿ ಸೇವೆಯಿಂದಲಿ
ಇಷ್ಟ ವರದಿಂದುದಯರಾದ || ಅ.ಪ ||
ಬಾಲ್ಯದಲ್ಲುಪನೀತ | ಆರ್ಯರಿಂದುಪದಿಷ್ಟ |
ಆರ್ಯ ಐಜೀವರ್ಯ | ಗುರುಕುಲಾವಸಿತ ||
ಕ್ರೌರ್ಯ ಹರಿಜಪ ಧೈರ್ಯದಿಂದಲಿ
ವೀರ್ಯವೃತ್ತರ ಜಪಿಸಿ ಗುರುಸುತ
ವರ್ಯನಪಮೃತಿ ಕಳೆದು ಗುರುವಿಂ
ಮಾನ್ಯವಂತನು ಎನಿಸಿ ಮೆರೆದ || ೧ ||
ಮಲದ ಅಪಹಾರಿಯ | ಜಲಪ್ರವಾಹದಿ ನಿಂದು |
ಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯ ||
ಒಲಿಮೆಯಿಂದಲಿ ಸೂರ್ಯೆಗರ್ಘ್ಯವ
ಕಾಲ ಮೀರದೆ ತಾನು ಕೊಡುತಲಿ
ಮೂಲಗ್ರಂಥವ ತಿಳಿಯ ಬೋಧವ
ಇಳೆಯ ಸುರರಿಗೆ ಪೇಳ್ದ ಮಹಿಮಾ || ೨ ||
ಅವಧೂತ ಚರ್ಯದಿ | ಅವನಿಯೋಳ್ಚರಿಸುತ್ತ |
ಭುವನ ಪಾವನ ಸುಧೆ | ದಿವಿಜರಿಗುಣಿಸೀ ||
ಶ್ರವಣ ಗೈಸುತ ಸುಧೆಯ ಗ್ರಂಥವ
ಅವನಿಯೊಳು ತತ್ವಾರ್ಥ ಬೋಧಿಸಿ
ಪ್ರವರ ಭೂಸುರ ಮುಕ್ತಿ ಮಾರ್ಗವ
ಹವಣೆ ಗೈದಿಹ ಭುವಿಯ ದಿವಿಜ || ೩ ||
ವನವನ ಚರಿಸುತ | ಮುನಿವಳ್ಳಿ ಪಳ್ಳಿಯಲಿ |
ಮುನಿ ಯೋಗ್ಯವೆನಿಸೂವ | ವಾನಪ್ರಸ್ಥಾಶ್ರಮದಿ ||
ಘನ ಸುವ್ರತವನೆ ಅಸಿಯಪತ್ರದಿ
ಮನವ ನಿರಿಸುತ ಗಣ್ಯನಾದೆಯೊ
ಅನಘ ಹರಿಕಾರುಣ್ಯ ನಿನ್ನಲಿ
ಗಣನೆ ಗೈಯ್ಯಲು ಮನುಜಗಸದಳ || ೪ ||
ಬಂದು ತದ್ದೇಶದ | ಅಧಿಪತಿ ಪ್ರಶ್ನಿಸಿ |
ಇಂದೆ ಜಾಗೀರ್ಕೊಡುಗೆಯ ||
ಅಂದ ನನ್ನದು ಮಾಡಿ ಕೊಡುವೆನು
ಎಂದು ಪೇಳಲು ಘನ ಸುಸಂಪದ
ನಿಂದಿಸುತ ವೈರಾಗ್ಯ ಭಾವದಿ
ಸಂಧಿಸೆಂದರು ತಪಕೆ ತಾಣವ || ೫ ||
ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿ |
ಕ್ಷಿತಿಯ ಸಂಚರಿಸುತ್ತ | ಕಿನ್ನಾಳಿಗಾಗಮಿಸೀ ||
ಹಿತನು ದೇಶಾಧಿಪತಿ ರೋಗವನೆ
ಹತಗೈದನ್ನವ ಜೊತೆಯಲುಂಬುವ
ಯತನ ಸಾಧಿತ ಪ್ರಾಪ್ತ ಕ್ಷಾಮವ
ಹತವ ಗೈಸಿದ ರಮೆಯ ನೊಲಿಸೀ || ೬ ||
ಮೇದಿನಿಯೊಳು ಖ್ಯಾತಿ | ಮೋದಾಪುರದಿ ನೆಲೆಸಿ |
ಮೋದ ಮುನಿನುತ ಬೋಧ | ಗ್ರಂಥಗಳ್ರಚಿಸೀ ||
ಮೋದದಿಂ ವೃಂದಾವನಸ್ಥರು
ಸಾಧು ಸೇವೆಗೆ ಅಭಯ ನೀಡುವ
ನಾದ ಗುರುಗೋವಿಂದವಿಠಲನ
ಮೋದ ಧ್ಯಾನಾಸಕ್ತರಾಗಿಹ || ೭ ||
viShNutIrthara pAda | niShTheyiMdali Bajise |
iShTArtha salisUvar | kRuShNapUjakarU || pa ||
jiShNusaKa SrI kRuShNa Bakutaru
SrEShTha daMpati garBajAtaru
suShThu jayamuni sEveyiMdali
iShTa varadiMdudayarAda || a.pa ||
bAlyadallupanIta | AryariMdupadiShTa |
Arya aijIvarya | gurukulAvasita ||
kraurya harijapa dhairyadiMdali
vIryavRuttara japisi gurusuta
varyanapamRuti kaLedu guruviM
mAnyavaMtanu enisi mereda || 1 ||
malada apahAriya | jalapravAhadi niMdu |
GaLige iralu udaya | valisi madhvavijaya ||
olimeyiMdali sUryegarGyava
kAla mIrade tAnu koDutali
mUlagraMthava tiLiya bOdhava
iLeya surarige pELda mahimA || 2 ||
avadhUta caryadi | avaniyOLcarisutta |
Buvana pAvana sudhe | divijariguNisI ||
SravaNa gaisuta sudheya graMthava
avaniyoLu tatvArtha bOdhisi
pravara BUsura mukti mArgava
havaNe gaidiha Buviya divija || 3 ||
vanavana carisuta | munivaLLi paLLiyali |
muni yOgyavenisUva | vAnaprasthASramadi ||
Gana suvratavane asiyapatradi
manava nirisuta gaNyanAdeyo
anaGa harikAruNya ninnali
gaNane gaiyyalu manujagasadaLa || 4 ||
baMdu taddESada | adhipati praSnisi |
iMde jAgIrkoDugeya ||
aMda nannadu mADi koDuvenu
eMdu pELalu Gana susaMpada
niMdisuta vairAgya BAvadi
saMdhiseMdaru tapake tANava || 5 ||
yati satyavarariMda | yati ASramava poMdi |
kShitiya saMcarisutta | kinnALigAgamisI ||
hitanu dESAdhipati rOgavane
hatagaidannava joteyaluMbuva
yatana sAdhita prApta kShAmava
hatava gaisida rameya nolisI || 6 ||
mEdiniyoLu KyAti | mOdApuradi nelesi |
mOda muninuta bOdha | graMthagaLracisI ||
mOdadiM vRuMdAvanastharu
sAdhu sEvege aBaya nIDuva
nAda gurugOviMdaviThalana
mOda dhyAnAsaktarAgiha || 7 ||
Leave a Reply