Esalugangala Kanti

Composer : Shri Vyasarajaru

By Smt.Shubhalakshmi Rao

ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳ
ಶಶಿಮುಖಿ ಚೆಲುವಿಕೆಯ [ಪ]
ಕುಸುಮನಾಭನ ಕೂಡೆನೆಂಬೋ ಭರದಿಂದ
ಬಿಸಿ ಹಾಲನೆ ಹೊತ್ತಳು [ಅ.ಪ]

ಹಾಲಕೊಂಡೀರೆಂದು ಸಾರಿದಡಾ
ಬಾಲೆ ಕೇರಿ ಕೇರಿಯ ಒಳಗೆ
ಹಾಲಿನ ಬೆಲೆಯನ್ನು ಹೇಳೆ ಮಾನಿನಿ ರನ್ನೆ
ಕೇಳಿದ್ದು ಕೊಡುವೆನೆಂದ (೧)

ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆ
ಒಮ್ಮನ ಹೊನ್ನೆಂದಳು
ಬೆಣ್ಣೆಗಳ್ಳ ಕೃಷ್ಣ ಕಣ್ಣು
ಸನ್ನೆಯ ಮಾಡಿ ನಿನ್ನ ಮೋಹಿಪೆನೆನ್ನಲು (೨)

ಕೆಟ್ಟೆ ಕೆಟ್ಟೆನೊ ಕೃಷ್ಣ
ಇತ್ತಲೇತಕೆ ಬಂದೆ ಅತ್ತೆ ಮಾವಂದಿರುಂಟು
ಥಟ್ಟನೆ ಕಂಡರೆ ಬಿಟ್ಟು ಬಿಡರು
ನಿನ್ನ ಮುಟ್ಟದಿರೆಂದಳಾಕೆ (೩)

ಎಂದ ಮಾತಿಗೆ ನಾನಂಜುವನಲ್ಲವೆ
ಇಂದಿನ ದಿನದೊಳಗೆ
ಮಂದಿರದೊಳಗಿದ್ದು ಮರುದಿನ ಪೋಗೆಂದು
ಮುಂಗೈಯ್ಯ ಪಿಡಿದುಕೊಂಡ (೪)

ಗಂಡನುಳ್ಳವಳ ಮುಂಗೈಯ್ಯ
ಪಿಡಿವಂಥ ಪುಂಡತನವು ಸರಿಯೆ
ಪುಂಡರೀಕಾಕ್ಷಿ ಕೇಳ್ ದುಂಡುಮಲ್ಲಿಗೆ
ಹುವ್ವ ಕಂಡರೆ ಬಿಡುವರೇನೆ (೫)

ಬಾಳುವ ಹೆಣ್ಣಿನ ತೋಳನೆ ಪಿಡಿವುದು
ನ್ಯಾಯವೇನೋ ನಿನಗೆ
ಫುಲ್ಲನಯನೆ ಕೇಳೆ ಆಯ್ದ ಮಲ್ಲಿಗೆ
ಹುವ್ವ ಬಲ್ಲವರು ಬಿಡುವರೇನೆ (೬)

ಬೈಗಾಯಿತು ಬೈದಾರು ಮನೆಯಲ್ಲಿ
ಬಿಡು ಬಿಡು ಎಲೆ ಗೋವಳ
ಐಗಾರ ನಾ ಕಾಣೆ ಜಗದಲ್ಲಿ
ಜೀವರ ಹಿಡಿದು ಬಿಡುವನಲ್ಲ (೭)

ಸಕ್ಕರೆ ಚಿಲಿಪಾಲು ಅರ್ಥಿ ಆಯಿತೆಂದು
ಎತ್ತಿ ಕೊಂಡು ಕುಡಿದ
ಅಕ್ಕರೆಯಿಂದಲಿ ಬೇಡು ನೀ ಕೇಳಿದ
ವಸ್ತುವ ಕೊಡುವೆನೆಂದ (೮)

ವಸ್ತುವೇತಕೆ ಪರ ವಸ್ತುವೆ ನಾ ನಿನ್ನ
ಮೆಚ್ಚಿ ಬಂದೇನೆಂದಳು
ಭಕ್ತರ ಸಿರಿಕೃಷ್ಣ ಕುಕ್ಷಿಯೊಳಗೆ
ಇಟ್ಟು ರಕ್ಷಿಸು ಎಂದಳಾಕೆ (೯)


esaLugaMgaLa kAMti hoLeva muKada DhALa
SaSimuKi celuvikeya [pa]
kusumanABana kUDeneMbO BaradiMda
bisi hAlane hottaLu [a.pa]

hAlakoMDIreMdu sAridaDA
bAle kEri kEriya oLage
hAlina beleyannu hELe mAnini ranne
kELiddu koDuveneMda (1)

kammane kAdiha emmeya hAlige
ommana honneMdaLu
beNNegaLLa kRuShNa kaNNu
sanneya mADi ninna mOhipenennalu (2)

keTTe keTTeno kRuShNa
ittalEtake baMde atte mAvaMdiruMTu
thaTTane kaMDare biTTu biDaru
ninna muTTadireMdaLAke (3)

eMda mAtige nAnaMjuvanallave
iMdina dinadoLage
maMdiradoLagiddu marudina pOgeMdu
muMgaiyya piDidukoMDa (4)

gaMDanuLLavaLa muMgaiyya
piDivaMtha puMDatanavu sariye
puMDarIkAkShi kEL duMDumallige
huvva kaMDare biDuvarEne (5)

bALuva heNNina tOLane piDivudu
nyAyavEnO ninage
Pullanayane kELe Ayda mallige
huvva ballavaru biDuvarEne (6)

baigAyitu baidAru maneyalli
biDu biDu ele gOvaLa
aigAra nA kANe jagadalli
jIvara hiDidu biDuvanalla (7)

sakkare cilipAlu arthi AyiteMdu
etti koMDu kuDida
akkareyiMdali bEDu nI kELida
vastuva koDuveneMda (8)

vastuvEtake para vastuve nA ninna
mecci baMdEneMdaLu
Baktara sirikRuShNa kukShiyoLage
iTTu rakShisu eMdaLAke (9)

Leave a Reply

Your email address will not be published. Required fields are marked *

You might also like

error: Content is protected !!