Composer : Shri Vyasarajaru
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಪ||
ನಾದದಿ ತುಂಬಿತು ಗೋವರ್ಧನಗಿರಿ
ಯಾದವಕುಲ ಘನ ತೊರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನು ಈಗಲು
ಸಾಧ್ಯವೆನೆ ಬೃಂದಾವನದೊಳು ||೧||
ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನೆ
ಆವು ಕಾವುತಲಿ ಗೋವಳನೆಲ್ಲರ
ಹಾವ ಭಾವದಲಿ ಬೃಂದಾವನದೊಳು ||೨||
ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃಂದಾವನದೊಳು |
ಸಾರಿ ಸಾರಿ ಶ್ರೀ ಕೃಷ್ಣನು ಈಗಲು
ತುರಗಳ ತಾ ಕಾಯ್ವ ಕದಂಬ ವನದೊಳು ||೩||
koLalanUduva caduranyAre pELammayya
taLiraMdadi tA poLeva karadi piDidu ||pa||
nAdadi tuMbitu gOvardhanagiri
yAdavakula Gana toreditu Kagakula
sAdhisi nODalu kRuShNanu Igalu
sAdhyavene bRuMdAvanadoLu ||1||
mEvu maretavu gOvugaLellavu
sAvadhAnadi haridaLu yamune
Avu kAvutali gOvaLanellara
hAva BAvadali bRuMdAvanadoLu ||2||
suraru suridarAkASadi sumagaLa
saridu pOgi nODe bRuMdAvanadoLu |
sAri sAri SrI kRuShNanu Igalu
turagaLa tA kAyva kadaMba vanadoLu ||3||
Leave a Reply