Composer : Shri Vyasarajaru
ಎಂತು ಪೊಗಳಲೊ ನಿನ್ನ ಯತಿಕುಲ ಶಿರೋರನ್ನ |ಪ|
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ |ಅ.ಪ|
ಪ್ರಥಮಾವತಾರದಲಿ ವ್ರತದಿ ರಾಮನ ಭಜಿಸಿ
ಅತಿ ಪಂಥದಿಂದ ಶರಧಿಯನು ದಾಟಿ
ಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆ
ಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ |೧|
ದ್ವಿತಿಯಾವತಾರದಲಿ ದೇವಕೀಜನ ಕಂಡು
ಸತಿಗೆ ಕಾಮಿಸಿದವನ ಸಾಹಸದಿ ಸದೆದೆ
ಪ್ರತಿಯಾದ ಮಾಗಧನ ಪೃತನದಲಿ ನೀ ಕೊಂದೆ
ಪ್ರತಿಯ ಕಾಣೆನೊ ನಿನಗೆ ಮೂರ್ಜಗದೊಳಗೆ |೨|
ತೃತಿಯಾವತಾರದಲಿ ತ್ರಿಜಗನುತಿಸಲು ಬಂದು
ಯತಿಯಾಗಿ ಮಹಾ ಮಹಿಮನನು ಭಜಿಸಿದೆ
ಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ
ಪ್ರತಿಮತ ಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ |೩|
eMtu pogaLalo ninna yatikula SirOranna |pa|
SAMta madhvAcArya saMta kulavarya |a.pa|
prathamAvatAradali vratadi rAmana Bajisi
ati paMthadiMda Saradhiyanu dATi
kShitijegaMkitavittu pUdOTavanu kitte
pratigANe ninage aprati parAkramiye |1|
dvitiyAvatAradali dEvakIjana kaMDu
satige kAmisidavana sAhasadi sadede
pratiyAda mAgadhana pRutanadali nI koMde
pratiya kANeno ninage mUrjagadoLage |2|
tRutiyAvatAradali trijaganutisalu baMdu
yatiyAgi mahA mahimananu Bajiside
kShitigadhika uDupiyali kRuShNanna nilisi
pratimata matava muride pUrNapraj~ja munivarane |3|
Leave a Reply