Composer : Shri Gurugovinda dasaru
ವ್ಯಾಸಾರ್ಯಾ – ವ್ಯಾಸಾರ್ಯ [ಪ]
ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ [ಅ.ಪ]
ಭುವಿ ಸ್ಪರ್ಶಿಲ್ಲದೆ | ಆವನಿಜನಿತ ಗುರುತವ ಪದ ಭಜಕಗೆ |
ಭವ ಪರಿಹರಿಸುವೆ |
ಭೀಕರವೆನೆ ನೃಪ | ಗಾಕುಹುಯೋಗವ ತಾಕುವ ಮುನ್ನವೆ |
ನೀ ಕಳೆದೆಯೊ ಗುರು ೧
ಹನ್ನೆರೆಡೊರ್ಷವು | ಪನ್ನಗ ನಗಪ ಪ್ರಪನ್ನ ಭಜಕ ನಿನ |
ಗಿನ್ನುಂಟೇ ಸಮ |
ಮಂದ ಜನೋದ್ಧಾರ | ವೆಂದು ರಚಿಸಿದೇ ಚಂದ್ರಿಕಾದಿ ತ್ರಯ |
ಸುಂದರ ಗ್ರಂಥ ೨
ವ್ಯಾಸ ತ್ರಯಾಭಿಧ | ಲೇಸು ಗ್ರಂಥ ಸಂಕಾಶಿಸೆ ಬಹು ವಿಧ |
ಆಸುರಿ ಮತ ಹನ
ದಾಸ ಪಂಥ ಉಪ | ದೇಶಿಸೆ ಶ್ರೀನಿವಾಸ ನಾಯಕರ |
ದಾಸರೆಂದೆನಿಸಿದೆ ೩
ವಾಸವ ನಾಮಕ | ದಾಸರಿಂದ ದಿಗ್ದೇಶ ಪ್ರಸರ ಮಹಿ |
ದಾಸನ ನಾಮವು
ಶ್ವಸನನ ಮತ ವಿ | ದ್ವೇಷಿವಾದ ಹರ ದೇಶ ದೇಶ ಹನು |
ಮೇಶ ಪ್ರತಿಷ್ಠಿತ ೪
ಸಾರ್ವ ಭೌಮ ಗುರು | ಗೋವಿಂದ ವಿಠಲನ
ತೋರ್ವುದೆನ್ನ ಹೃದ | ಯಾವಕಾಶದಲಿ ೫
vyAsAryA – vyAsArya [pa]
daiSikArya brahmaNyara karajane [a.pa]
Buvi sparSillade | Avanijanita gurutava pada Bajakage |
Bava pariharisuve |
BIkaravene nRupa | gAkuhuyOgava tAkuva munnave |
nI kaLedeyo guru (1)
hannereDorShavu | pannaga nagapa prapanna Bajaka nina |
ginnuMTE sama |
maMda janOddhAra | veMdu racisidE caMdrikAdi traya |
suMdara graMtha (2)
vyAsa trayABidha | lEsu graMtha saMkASise bahu vidha |
Asuri mata hana
dAsa paMtha upa | dESise SrInivAsa nAyakara |
dAsareMdeniside (3)
vAsava nAmaka | dAsariMda digdESa prasara mahi |
dAsana nAmavu
Svasanana mata vi | dvEShivAda hara dESa dESa hanu |
mESa pratiShThita (4)
sArva Bauma guru | gOviMda viThalana tOrvudenna hRuda |
yAvakASadali (5)
Leave a Reply