Composer : Shri Purandara dasaru
ವಾಸುದೇವನ ಚರಣವನಜ ವಂದಿಪನೆ , ಸಂ-
ನ್ಯಾಸ ರತ್ನಾಕರನೆ ವ್ಯಾಸಮುನಿರಾಯ [ಪ]
ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ-
ವಾದಿ ಫಣಿ ಗರುಡ ತತ್ವಾದಿರಚಿತ
ವಾದಿ ಭಯಂಕರ ದುರ್ವಾದಿ ಕೋಲಾಹಲ
ವಾದಿ ಮಸ್ತಕ ಶೂಲ ಮಧುರ ಗುಣಶೀಲ [೧]
ವೈಷ್ಣವೋತ್ತಮನೆ ಸದ್ವೈಷ್ಣವ ವ್ರಜಾನಂದ
ವೈಷ್ಣವಾಗಮ ಭರಿತ ವೈಷ್ಣವ ಸುಪ್ರೀತ
ವೈಷ್ಣವ ಕಮಲ ಸೂರ್ಯ ವೈಷ್ಣವ ಕುಮುದ ಚಂದ್ರ
ವೈಷ್ಣವ ಕುಲೋತ್ಕೃಷ್ಟ ವೈಷ್ಣವ ಶಿಷ್ಟ [೨]
ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮ
ಹರಿಕೃಷ್ಣ ಚರಣ ಸರಸೀರುಹ ಭೃಂಗ
ಗುರು ಪುರಂದರ ವಿಠ್ಠಲನೆ ಪರದೈವವೆಂ-
ದರುಹಿ ಸುಜನರ ಪೊರೆವ ವ್ಯಾಸ ಮುನಿರಾಯ [೩]
vAsudEvana caraNavanaja vaMdipane , saM-
nyAsa ratnAkarane vyAsamunirAya [pa]
vAdigajasiMha durvAdi mRuga BEruMDa mAyA-
vAdi PaNi garuDa tatvAdiracita
vAdi BayaMkara durvAdi kOlAhala
vAdi mastaka SUla madhura guNaSIla [1]
vaiShNavOttamane sadvaiShNava vrajAnaMda
vaiShNavAgama Barita vaiShNava suprIta
vaiShNava kamala sUrya vaiShNava kumuda caMdra
vaiShNava kulOtkRuShTa vaiShNava SiShTa [2]
hariyillada kShEtravariyada mahAmahima
harikRuShNa caraNa sarasIruha BRuMga
guru puraMdara viThThalane paradaivaveM-
daruhi sujanara poreva vyAsa munirAya [3]
Leave a Reply