Composer : Shri Purandara dasaru
ಕಂಡೆ ಕರುಣನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ |ಪ |
ರುಂಡ ಮಾಲೆ ಸಿರಿಯ ನೊಸಲೊಳು ಕೆಂಡ ಗಣ್ಣಿನ ಬಗೆಯ, ಹರನ ||ಅ.ಪ||
ಗಜ ಚರ್ಮಾಂಬರನ ಗೌರೀವರ ಜಗದೀಶ್ವರನ
ತ್ರಿಜಗನ್ಮೋಹನನ, ತ್ರಿಲೋಚನ ತ್ರಿಪುರಾಂತಕ ಶಿವನ, ಹರನ |೧|
ಭಸಿತ ಭೂಷಿತ ಹರನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಲಿ ಶಶಿ ಶೇಖರ ಶಿವನ, ಹರನ |೨|
ಕಪ್ಪು ಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿಸುತ ಸರ್ಪ ಭೂಷಣ ಶಿವನ, ಹರನ |೩|
ಕಾಮಿತ ಫಲವೀವನ ಭಕುತರ ಪ್ರೇಮದಿ ಸಲಹುವನ
ರಾಮ ನಾಮ ಸ್ಮರನ ರತಿ ಪತಿ ಕಾಮನ ಸಂಹರನ, ಶಿವನ |೪|
ಧರೆಗೆ ದಕ್ಷಿಣಕಾಶಿ ಎನಿಸುವ ಪಂಪಾ ಪುರವಾಸಿ
ತಾರಕ ಉಪದೇಶೀ ಪುರಂದರ ವಿಠಲ ಭಕ್ತರ ಪೋಷಿ , ಹರನ |೫|
kaMDe karuNa nidhiya gaMgeya maMDeyoLiTTa doreya |pa |
ruMDa mAle siriya nosaloLu keMDa gaNNina bageya, harana ||a.pa||
gaja carmAMbarana gaurIvara jagadIshvarana
trijaganmOhanana, trilOcana tripurAMtaka shivana, harana |1|
bhasita bhUShita harana bhaktara vashadoLagirutihana
pashupatiyenisuvana vasudheli shashi shEkhara shivana, harana |2|
kappu goraLa harana kaMdarpa pitana sakhana
muppura gelidavana munisuta sarpa bhUShaNa shivana, harana |3|
kAmita phalavIvana bhakutara prEmadi salahuvana
rAma nAma smarana rati pati kAmana saMharana, shivana |4|
dharege dakShiNakAshi enisuva paMpA puravAsi
tAraka upadEshI puraMdara viThala bhaktara pOShi , harana |5|
Leave a Reply