Anna Bhaganna

Composer : Shri Varada gopalavittala

By Smt.Shubhalakshmi Rao

ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿ
ಪುಣ್ಯ ಲೋಕವ ಸೇರಿದ್ಯಾ ಗುರುವೆ |
ಸಣ್ಣವರು ನಾವು ಅನುಗುಣ್ಯ |
ನಿನ್ನಯ ಪಾದವನ್ನು
ಬಿಟ್ಟಿರಲಾರೆವೊ ಗುರುವೇ || ಪ ||

ಚಿಕ್ಕಂದಿನಿಂದ ಬಲು
ಅಕ್ಕರತೆಯಿಂದೆಮಗೆ ನೀ |
ದಿಕ್ಕೆಂದು ನಂಬಿದೆವೊ ಗುರುವೆ |
ಮಕ್ಕಳಾಟಿಕೆ ಮಾಡಿ ಠಕ್ಕಿಸಿ
ನಮ್ಮನ್ನು | ಬಿಟ್ಟು ಪೋಪುದನರಿಯೆವೊ |
ಕಕ್ಕಸದಿ ಯಾತನೆಯ ಕರಕರಿಯ ಸಂಸಾರ |
ಹೊಕ್ಕು ನೋಡನ್ನರಿಯವೊ ಗುರುವೆ |
ಪಕ್ಕಿವಾಹನ ನಿನ್ನ ಕರದೊಯ್ದನೇ |
ಅಕಟಕಟ ದಿಕ್ಕು ಗೇಡಿಗಳಾದೆವೊ |೧|

ಮನಸಿಗತಿ ಹರುಷವಾದಂಥ ಮಾತನು |
ಹೇಳಿ ಕುಣಿಕುಣಿಸ್ಯಾಡಿಸುವಿಯೊ ಗುರುವೆ |
ಅನಘ ನಿನ್ನಂಥ ಅಣ್ಣನು
ಜನುಮಜನುಮಕ್ಕೂ |
ಘನವಾಗಿ ಬಯಸುತಿಹವೋ ಗುರುವೆ |
ಕ್ಷಣ ಕ್ಷಣಕೆ ಮಾಡಿದುಪಕಾರಗಳೌ ನೆನಸಿ |
ಮಣಿದು ನಮೊ ನಮೊ ಎಂಬೆವೊ ಗುರುವೆ |
ಕನಸಿನಂತಾಯಿತು ತವಚರಿಯ ರೂಪಂಗಳೆ |
ನೆನೆಸಿ ಎದೆ ಧಿಗಲೆಂಬದೊ ಗುರುವೇ |೨|

ಪರಮ ಸುಖದಾಯ
ಗುರುರಾಯ ನೀನಲ್ಲದಲೆ |
ಪರರನ್ನಾಶ್ರೈಸ ಲರಿಯೆವೊ ಗುರುವೆ |
ಅರಿಯದವನಲ್ಲ ನಮ್ಮ
ಭಿಮಾನದೊಡೆಯನೆ |
ಪೊರವ ಭಾರವೆ ನಿನ್ನದೊ ಗುರುವೆ |
ಪರಿ ಪರಿಯಲಿ ತಮಗೆ ಪೇಳುವದೇನು |
ತವಚರಣ ಕಟ್ಟಿದ್ದೆ ಬಿರಿದೊ ಗುರುವೆ |
ವರದಗೋಪಾಲವಿಠಲನ ದಾಸಾಗ್ರಣಿಯೆ |
ವದಗು ಸೌಭಾಗ್ಯ ನಿಧಿಯೆ ಮದಿ[ರಿ]ಯಾ |೩|


aNNa BAgaNNa nI kaNNige mareyAgi
puNya lOkava sEridyA guruve |
saNNavaru nAvu anuguNya |
ninnaya pAdavannu
biTTiralArevo guruvE || pa ||

cikkaMdiniMda balu
akkarateyiMdemage nI |
dikkeMdu naMbidevo guruve |
makkaLATike mADi Thakkisi
nammannu | biTTu pOpudanariyevo |
kakkasadi yAtaneya karakariya saMsAra |
hokku nODannariyavo guruve |
pakkivAhana ninna karadoydanE |
akaTakaTa dikku gEDigaLAdevo |1|

manasigati haruShavAdaMtha mAtanu |
hELi kuNikuNisyADisuviyo guruve |
anaGa ninnaMtha aNNanu
janumajanumakkU |
GanavAgi bayasutihavO guruve |
kShaNa kShaNake mADidupakAragaLau nenasi |
maNidu namo namo eMbevo guruve |
kanasinaMtAyitu tavacariya rUpaMgaLe |
nenesi ede dhigaleMbado guruvE |2|

parama suKadAya
gururAya nInalladale |
pararannAshraisa lariyevo guruve |
ariyadavanalla namma
BimAnadoDeyane |
porava BArave ninnado guruve |
pari pariyali tamage pELuvadEnu |
tavacaraNa kaTTidde birido guruve |
varadagOpAlaviThalana dAsAgraNiye |
vadagu saubhAgya nidhiye madi[ri]yA |3|

Leave a Reply

Your email address will not be published. Required fields are marked *

You might also like

error: Content is protected !!