Composer : Shri Gopala dasaru
ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ
ಕುಪ್ತರಾದರೆ ಕೇಳಿ ಅಪ್ರಾಪ್ತರು ||ಪ||
ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ
ನಿರಯವೇ ಪ್ರಾಪ್ತಿ ಸಂದೇಹವಿಲ್ಲ
ಹಿರಿಯ ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು
ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ ||೧||
ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ
ಎಷ್ಟು ಮಾಡಿದರು ಗತಿ ಪೊಂದುವನೆ
ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ
ಎಷ್ಟು ಸುಖ ಐದುವನು ನಷ್ಟವಿಲ್ಲದೆ ||೨||
ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ
ಪರಮಪದ ದೊರಕುವುದೆ ಮರುಳನಲ್ಲದೆ
ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ
ಶರಧಿಯನು ದೂಷಿಸಲು ಹರುಷಬಡುವುದೆ ||೩||
ಹರನ ದ್ವೇಷವ ಮಾಡಿ ಹರಿಯ ಪೂಜೆಯ ಮಾಡೆ
ಪರಮ ಗತಿಯಾಗುವುದೆ ಪತಿತನಿಗೆ
ಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆ
ವರ ಭೋಜನವು ಅವಗೆ ಒದಗಿ ಆಗುವುದೆ ||೪||
ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದ
ದೇವನಲ್ಲದೆ ಜೀವನೆನಲು ಬಿದ್ದ
ಪಾವನ್ನಮೂರುತಿ ಗೋಪಾಲವಿಠಲನಂಘ್ರಿ
ಸೇವಕಗೇನು ಗತಿ ಅದವರಿಗೆ ಆಗಲಿ ||೫||
Apta mAtidu nija prApta janake
kuptarAdare kELi aprAptaru ||pa||
hariya pUjisi necci parivAra biTTare
nirayavE prApti saMdEhavilla
hiriya harigOla naMbi kirid~huTTugaLa biDalu
Baradi hoLedATi tA dAriya sEruvane ||1||
kRuShNanalli dvESha nArAyaNanalli Bakuti
eShTu mADidaru gati poMduvane
siTTinalli sarpana tuTi tudiya civuTidare
eShTu suKa aiduvanu naShTavillade ||2||
hariyalli dvESha haranalli Bakuti mADidare
paramapada dorakuvude maruLanallade
Saradhi ASrayisidda maccana balamADi
Saradhiyanu dUShisalu haruShabaDuvude ||3||
harana dvEShava mADi hariya pUjeya mADe
parama gatiyAguvude patitanige
haraviyillada pAka karaviTTu kalasidare
vara BOjanavu avage odagi Aguvude ||4||
dEvanige kartRutva uMTu eMdava gedda
dEvanallade jIvanenalu bidda
pAvannamUruti gOpAlaviThalanaMGri
sEvakagEnu gati adavarige Agali ||5||
Leave a Reply