Anagha ninnanghri seve

Composer : Shri Gurugopala vittala

By Smt.Shubhalakshmi Rao

ಅನಘಾ ನಿನ್ನಂಘ್ರಿ ಸೇವೆ ಯನಗೆಂತು ದೊರೆವದೊ |
ಮನದ ದುರ್ವಿಷಯಕಾಂಕ್ಷಿಗೆ
ಕೊನೆಗಾಣೆ ಕೇಶವಾ |ಪ|

ನೋಡಬಾರದ ರೂಪವು ನೋಡಿ
ನಯನಾ ಕಂಗೆಡಿಸಿತು |
ಆಡಬಾರದ ನಾಡಿ ಜಿಹ್ವೆ
ಅತಿ ತುಚ್ಛನ ಮಾಡಿತು |
ಮಾಡಬಾರದ ಬಯಕಿಗಳಿಂದ
ಮನ ಹೊಲೆಗೆಡಿಸಿತು |
ನೋಡಲಿಲ್ಲಾ ಪಾಡಲಿಲ್ಲಾ ನಿನ್ನ
ಧ್ಯಾನ ಮಾಡಲಿಲ್ಲ ಕ್ಷಣವೆ ನಾ |೧|

ಹಿಂದಿನ ಕಾಲದಿ ಬಹುಕಾಯ
ಹೀಗಾಗಿ ಹೋಯಿತು |
ಇಂದಿನ ದೇಹದ ವಿಚಾರ
ಈ ವಿಧವಾಯಿತು |
ಮುಂದೆ ನಿನ್ನ ಪದ ಸನ್ನಿಧಿಗೆ
ಪೊಂದುವ ಬಗೆ ಯಾವುದೊ |
ತಂದೆ ನಿನ್ನ ಬಂಧಕ
ಶಕುತಿಯಿಂದಲೇ ಹೀಗಾಯಿತೊ |೨|

ಕ್ಷಣ ಭಂಗುರ ವಿಷಯೇಂದ್ರಿಯ
ತನು ಸ್ಥಿರವೆಂದು ಅರಿತು ನಾ |
ವನಜ ಸಂಭವನ ಕಲ್ಪ
ತನಕ ಯೋಚಿಸುವೆನೊ |
ನೆನಸಲೊಮ್ಮೊಮ್ಮೆ ಸೋಜಿಗಾ
ಯನಗೆ ತೋರುತಲಿದೆ |
ಮನದಾಸಿಗೆ ನೆಲೆಗಾಣದೆ ನಾ
ನಿನಗೆ ಮೊರೆಯಿಡುವೆನೊ |೩|

ಆರದೀ ತನು ಆರದೀ ಧನ
ಆರ ಬಂಧುಗಳಾರಿಗೆ |
ಆರಗೋಸುಗ ಬಡುವ ಈ
ಧಾವತಿ ಆರಿಗೀವುಪಕಾರವೋ |
ಘೋರವಾದ ಕ್ಷುಧಿ ತೃಷಿ
ಮಮತಾಹಂಕಾರದೊಳೆನ್ನ ಮುಣುಗಿಸಿ
ಗಾರು ಮಾಡಿದೆ ಸೈಸೈ ನಿನ್ನುಪಕಾರವೆ
ಇದು ಮಾಧವ |೪|

ಕಾಲ ದೇಶಾ ವಿದ್ಯ ಪ್ರಕೃತಿ ಕಾರ್ಯ
ಕಾರಣ ಸಂಸ್ಕೃತಿ |
ಮೂಲ ಜಾಲಗಳಿಗೆ ಮುಖ್ಯ ಮೂಲ
ನೀನೆಂದು ನಂಬಿದೆ |
ಆಲಸವು ಸಲ್ಲದು ಭವಕೆ
ಆರಿಗೆ ಮೊರೆಯಿಡುವೆನೊ |
ಪಾಲಿಸುವದುಚಿತವೊ
ಗುರು ಗೋಪಾಲ ವಿಠ್ಠಲ ವೆಂಕಟಾ |೫|


anaghA ninnaMghri sEve yanageMtu dorevado |
manada durviShayakAMkShige
konegANe kESavA |pa|

nODabArada rUpavu nODi
nayanA kaMgeDisitu |
ADabArada nADi jihve
ati tucCana mADitu |
mADabArada bayakigaLiMda
mana holegeDisitu |
nODalillA pADalillA ninna
dhyAna mADalilla kShaNave nA |1|

hiMdina kAladi bahukAya
hIgAgi hOyitu |
iMdina dEhada vicAra
I vidhavAyitu |
muMde ninna pada sannidhige
poMduva bage yAvudo |
taMde ninna baMdhaka
SakutiyiMdalE hIgAyito |2|

kShaNa BaMgura viShayEMdriya
tanu sthiraveMdu aritu nA |
vanaja saMBavana kalpa
tanaka yOcisuveno |
nenasalommomme sOjigA
yanage tOrutalide |
manadAsige nelegANade nA
ninage moreyiDuveno |3|

AradI tanu AradI dhana
Ara baMdhugaLArige |
AragOsuga baDuva I
dhAvati ArigIvupakAravO |
GOravAda kShudhi tRuShi
mamatAhaMkAradoLenna muNugisi
gAru mADide saisai ninnupakArave
idu mAdhava |4|

kAla dESA vidya prakRuti kArya
kAraNa saMskRuti |
mUla jAlagaLige muKya mUla
nIneMdu naMbide |
Alasavu salladu Bavake
Arige moreyiDuveno |
pAlisuvaducitavo
guru gOpAla viThThala veMkaTA |5|

Leave a Reply

Your email address will not be published. Required fields are marked *

You might also like

error: Content is protected !!