Muniya nodiro

Composer : Shri Gopala dasaru

By Smt.Shubhalakshmi Rao

ಮುನಿಯ ನೋಡಿರೊ ಮುಕುತಿ ಧನವ ಬೇಡಿರೊ
ಜನುಮರಹಿತನಾಗಿ ನಿಂದು
ಘನವರವೀವ ರಾಘವೇಂದ್ರ || ಪ ||

ಸಂತರಗೂಡಿ ಸಕಲ ಚಿಂತೆಯ ಬಿಡಿ
ಪಂಥವ ನಾಡಿ ನಾನೆಂತೆಂಬೋದು ಬಿಡಿ
ಅಂತರಂಗದಲಿ ಹರಿಯಾ
ಚಿಂತೀಸಿ ಚಿತ್ತದಲ್ಲಿ || ೧ ||

ಗೋಳಕತ್ರಯಾ ಇನ್ನು ಕೇಳು ನಿರ್ಣಯಾ
ಆಲೋಚನೆ ಯಲ್ಲಿ ಶೀಲಮೂರ್ತಿಯಾ
ಅಳನಸಹಿತ ಇಪ್ಪನಲ್ಲಿ ಬಹಳ
ಫಲವನೀವುತಲೀ || ೨ ||

ಮಂದಜಗವನು ಪೊರೆಯೆ ಒಂದು ರೂಪದಿ
ಬಂದು ಹರಿಯು ತಾನಿಲ್ಲಿ ನಿಂದೀರೂಪದಿ
ಸುಂದರಾಂಗ ಗೋಪಾಲವಿಠಲ
ತಂದು ಫಲವನೀವುತಿಪ್ಪ || ೩ ||


muniya nODiro mukuti dhanava bEDiro
janumarahitanAgi niMdu
GanavaravIva rAGavEMdra || pa ||

saMtaragUDi sakala ciMteya biDi
paMthava nADi nAneMteMbOdu biDi
aMtaraMgadali hariyA
ciMtIsi cittadalli || 1 ||

gOLakatrayA innu kELu nirNayA
AlOcane yalli SIlamUrtiyA
aLanasahita ippanalli bahaLa
PalavanIvutalI || 2 ||

maMdajagavanu poreye oMdu rUpadi
baMdu hariyu tAnilli niMdIrUpadi
suMdarAMga gOpAlaviThala
taMdu PalavanIvutippa || 3 ||

Leave a Reply

Your email address will not be published. Required fields are marked *

You might also like

error: Content is protected !!