Guru Raghavendrara

Composer : Shri Gopala dasaru

By Smt.Shubhalakshmi Rao

ಗುರುರಾಘವೇಂದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ | ಪ |
ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ
ಕರಿಯು ಸಿಂಹನ ಕಂಡ ತೆರನಾಗುವುದಯ್ಯ | ಅ |

ಗುರುಮಧ್ವ ಮತವೆಂಬ ವರ ಕ್ಷೀರಾಂಬುಧಿಯಲ್ಲಿ
ಹರಧರಿಸಿದ ಶಶಿಯಂತುದಿಸಿ
ಪರಮತ ತಿಮಿರಕ್ಕೆ ತರಣಿ ಕಿರಣವೆನಿಸಿ
ಪಿರಿದು ಮೆರೆದ ಸೀತಾರಾಮಾರ್ಚಕರಾದ | ೧ |

ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆಂದು
ಗರುಡ ಶೇಷ ರುದ್ರ ಸಮರೆಂದು ಸ್ಥಾಪಿಸಿ
ಸ್ಥಿರತರತಮ ಪಂಚಭೇದ ಸತ್ಯವೆಂಬ | ೨ |

ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವ
ಘಯೆನ್ನೆ ಘನಜ್ಞಾನ ಭಕ್ತಿಯೀವಾ
ವೇಂ ಎನೆ ವೇಗದಿ ಜನನ ಮರಣ ದೂರ
ದ್ರಯೆನ್ನೆ ದ್ರವಿಣಾರ್ಥ ಶೃತಿಪಾದ್ಯನ ಕಾಂಬ | ೩ |

ಅಂಧಕರಿಗೆ ಚಕ್ಷು ವಂಧ್ಯೆಯರಿಗೆ ಸುತರು
ಬಂದ ಬಂದವರಿಗ್-ಅಭೀಷ್ಟವ ಕೊಡುತ
ಒಂದಾರುನೂರು ವತ್ಸರ ಬೃಂದಾವನದಲಿ
ಚಂದಾಗಿ ನಿಂದು ಮೆರೆವ ಕೃಪಾಸಿಂಧು | ೪ |

ದೇವಾಂಶರಾಗಿ ತುಂಗಾತೀರದಿ ನಿಂದು
ಸೇವೆ ಭೂಸುರರಿಂದ ಬಹುಕೊಳ್ಳುತ
ಭಾವಜನಯ್ಯ ಗೋಪಾಲವಿಠ್ಠಲನ್ನ
ಸೇವಿಸುತಿಹ ಯತಿಕುಲ ಶಿಖಾಮಣಿಯಾದ | ೫ |


gururAGavEMdrara caraNakamalavannu
smarisuva manujarige | pa |
karekaregoLisuva durita duShkRutavella
kariyu siMhana kaMDa teranAguvudayya | a |

gurumadhva mataveMba vara kShIrAMbudhiyalli
haradharisida SaSiyaMtudisi
paramata timirakke taraNi kiraNavenisi
piridu mereda sItArAmArcakarAda | 1 |

hariyE sarvottama siriyu Atana rANi
paramEShTi marutare gurugaLeMdu
garuDa SESha rudra samareMdu sthApisi
sthirataratama paMcaBEda satyaveMba | 2 |

rAyenne rASidOShagaLella dahisuva
Gayenne Ganaj~jAna BaktiyIvA
vEM ene vEgadi janana maraNa dUra
drayenne draviNArtha SRutipAdyana kAMba | 3 |

aMdhakarige cakShu vaMdhyeyarige sutaru
baMda baMdavarig-aBIShTava koDuta
oMdArunUru vatsara bRuMdAvanadali
caMdAgi niMdu mereva kRupAsiMdhu | 4 |

dEvAMSarAgi tuMgAtIradi niMdu
sEve BUsurariMda bahukoLLuta
BAvajanayya gOpAlaviThThalanna
sEvisutiha yatikula SiKAmaNiyAda | 5 |

Leave a Reply

Your email address will not be published. Required fields are marked *

You might also like

error: Content is protected !!