Composer : Shri Gurugopala Vittala
ರಾಮ ರಘುಕುಲ ಲಲಾಮ ರಣರಂಗ
ಭೀಮ ಸುರಸಾರ್ವಭೌಮ ತಾಮಸ ಅಸುರ
ರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣ
ಕಾಮ ಗುಣಗಣಭೂಮ ||ಪ||
ಶಶಿ ಶೇಖರ ವರದಿಂದ ಶಶಿರಾದ್ಯ ಸುರರು
ತ್ರಿದಶರ ಬಾಧಿಸಲು ಸಾಗಿಪೋಗಿ
ಬಿಸಜ ಸಂಭವಗೆ ವಂದಿಸಿ ಮೊರೆಯಿಡಲು ಅವರ
ಕುಶಲವನು ಪೇಳೆ ತಿಳಿದು ನಲಿದು
ದಶ ದಿಶಜಯಿಸಿದ ನೃಪ ದಶರಥ ನಂದನ ನೆ-
ನಿಸಿ ಅನುನರಿಂದಲಿ ಬೆಳೆದು ನಲಿದು
ಋಷಿ ಮಖ ಕೆಡಿಸಿದ ಖರ ತ್ರಿದಶರ ದೂಷಣ ಖಳರ
ನಿಶಿತ ಶರದಲ್ಲಿ ಯಮನ ವಶವನೈದಿಸಿದಸಮಾ ||೧||
ಅಣಕವಾಡುತ ಶಿವನ ಧನು ಮುರಿದು
ಜನಕ ನಂದನೆ ಮನಕೆ ಹರುಷ ಮಾಡಿ ಕೂಡಿ
ಕ್ಷಣದೊಳಗೆ ಪರುಶುರಾಮನ ಶರಾಸನ ಪಡದು
ಘನ ಮುದದಿ ಪುರಕೆ ಬಂದು ನಿಂದು
ಜನಕನಾಜ್ಞನೆಯ ವಹಿಸಿ ವನಿತೆ ಲಕ್ಷ್ಮಣ ಸಹಾ
ವನ ಕ್ರೀಡೆ ಮಾಳ್ಪೆನೆಂದು ಬಂದು
ಮುನಿಪ ಶರಭಂಗಾ ಋಷಿಮನೋ ವಾಂಛಲ್ಯವನು ಸಲಿಸಿ
ದನುಜ ಮಾರೀಚನ ಹನನಗೈಸಿದ ಮಹಿಮಾ ||೨||
ವಕ್ಷದಿಹ ಸೀತೆಯು ಪರೋಕ್ಷನೋಪಾದಿಯಲಿ
ಲಕ್ಷಣನಿಂದ ಕೂಡಿ ಆಡಿ
ಅಕ್ಷರಿಪು ಮೊರೆ ಹೋಗಲು ಅಕ್ಷಯವರವನಿತ್ತು
ತಕ್ಷಣದಿ ಇನಜಗೊಲಿದು ನಲಿದು
ಆಕ್ಷೀಣ ಬಾಹುಬಲವಾಲಿಗಕ್ಷೇಮಗೈಸಿ ಕಪಿ
ರಿಕ್ಷ ಕಟಕವನೆ ಕರಸಿ ನೆರಸಿ
ದಕ್ಷ ವಿಭೀಷಣನ ಪಾಲಿಸಿ ದಕ್ಷಿಣಾಬ್ಧಿಯು ಬಿಗಿದಾ
ರಕ್ಷ ಕುಲ ಶಿಕ್ಷೆಯಲಿ ದಕ್ಷ ಕಮಲದಳಾಕ್ಷ ||೩||
ಚಂಡ ಮಾರ್ತಂಡಕರ ಅಂಡೊಲಿವನಿಬಿಡ ತಮ
ಖಂಡಿಸಿ ತೆರದಿ ಶರದಿ ಧುರದಿ
ಥಂಡ ಥಂಡದಿ ಬಂದ ಖಂಡ ಬಲುರಕ್ಕಸರಾ
ದಂಡಿಸಿ ಧರೆಗೆ ಕೆಡಹಿ ಮಡುಹಿ
ಕಂಡು ರೋಷದಿ ಬಂದ ಮಂಡೋದರಿಯ ಧವನ
ಕುಂಡಲ ಮುಕುಟದಿ ಮೆರೆವಾ ಶಿರವಾ
ಚೆಂಡಾಡಿ ತಲೆಗಳು ಭೂಮಂಡಲಕೆ ಭೂಷಣವ
ಮಂಡಿಸಿ ಮೆರದ ಉದ್ಧಂಡ ವಿಕ್ರಮಕ ಧೀರಾ ||೪||
ಧರೆಯ ಭಾರವ ನಿಳುಹೆ ಸುರರು ಪೂಮಳೆ ಗರಿಯೆ
ಧರಣಿಸುತೆಯನ್ನು ಬೆರೆದು ಮೆರ್ರ್ದು
ಶರಣ ವಿಭೀಷಣಗೆ ಸ್ಥಿರದಿ ಲಂಕೆಯನಿತ್ತು
ಮರುತ ಜಯಿಸೆ ಜೀವರಾನರ ನಿಜ
ಪುರಕ್ಕೆ ಐದಿ ಸಾಮ್ರಾಜ್ಯ ವಿಭವ
ಹರುಷದಲಿ ಅನುಭವಿಸಿ ಶರಣರನ ಪಾಲಿಸದೆ
ಕರುಣಿ ಗುರುಗೋಪಾಲವಿಠಲ ನಮ್ಮನು ಕಾವ||೫||
rAma raGukula lalAma raNaraMga
BIma surasArvaBauma tAmasa asura
rAmanidhe Bakuta ciMtAmaNiye paripUrNa
kAma guNagaNaBUma ||pa||
SaSi SEKara varadiMda SaSirAdya suraru
tridaSara bAdhisalu sAgipOgi
bisaja saMBavage vaMdisi moreyiDalu avara
kuSalavanu pELe tiLidu nalidu
daSa diSajayisida nRupa daSaratha naMdana ne-
nisi anunariMdali beLedu nalidu
RuShi maKa keDisida Kara tridaSara dUShaNa KaLara
niSita Saradalli yamana vaSavanaidisidasamA ||1||
aNakavADuta Sivana dhanu muridu
janaka naMdane manake haruSha mADi kUDi
kShaNadoLage paruSurAmana SarAsana paDadu
Gana mudadi purake baMdu niMdu
janakanAj~janeya vahisi vanite lakShmaNa sahA
vana krIDe mALpeneMdu baMdu
munipa SaraBaMgA RuShimanO vAMCalyavanu salisi
danuja mArIcana hananagaisida mahimA ||2||
vakShadiha sIteyu parOkShanOpAdiyali
lakShaNaniMda kUDi ADi
akSharipu more hOgalu akShayavaravanittu
takShaNadi inajagolidu nalidu
AkShINa bAhubalavAligakShEmagaisi kapi
rikSha kaTakavane karasi nerasi
dakSha viBIShaNana pAlisi dakShiNAbdhiyu bigidA
rakSha kula SikSheyali dakSha kamaladaLAkSha ||3||
caMDa mArtaMDakara aMDolivanibiDa tama
KaMDisi teradi Saradi dhuradi
thaMDa thaMDadi baMda KaMDa balurakkasarA
daMDisi dharege keDahi maDuhi
kaMDu rOShadi baMda maMDOdariya dhavana
kuMDala mukuTadi merevA SiravA
ceMDADi talegaLu BUmaMDalake BUShaNava
maMDisi merada uddhaMDa vikramaka dhIrA ||4||
dhareya BArava niLuhe suraru pUmaLe gariye
dharaNisuteyannu beredu merrdu
SaraNa viBIShaNage sthiradi laMkeyanittu
maruta jayise jIvarAnara nija
purakke aidi sAmrAjya viBava
haruShadali anuBavisi SaraNarana pAlisade
karuNi gurugOpAlaviThala nammanu kAva||5||
Leave a Reply