Chelveraratiya Tandettire

Composer : Shri Harapanahalli Bheemavva

By Smt.Shubhalakshmi Rao

ಚೆಲ್ವೇರಾರತಿಯ ತಂದೆತ್ತಿರೆ |ಪ|

ಹುಟ್ಟಿದಳಾ ಕ್ಷೀರಸಾಗರದಲಿ ಸ-
ಮಸ್ತ ಜನರಿಗೆ ಸುಖವ ನೀಡುತಲಿ
ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ
ಪಟ್ಟದರಸಿ ಮುದ್ದು ಮಹಾಲಕ್ಷ್ಮಿಗೆ |೧|

ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ-
ನಿತ್ತು ವಜ್ರದ ಬುಗುಡಿ ವೈಯಾರದಿಂದ
ತಿದ್ದಿ ಬೈತಲೆ ಜಡೆ ಬಂಗಾರ ರಾಗಟೆ
ಪದ್ಮನಾಭನ ರಾಣಿ ಮಾಲಕ್ಷ್ಮಿಗೆ |೨|

ಸಣ್ಣ ಮುತ್ತಿನ ವೋಲೆ ಸರಪಳಿ ಚಳತುಂಬು
ಚಿನ್ನದ ಸರಿಗೆ ಮೋಹನ್ನಮಾಲೆ
ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ
ಚೆನ್ನಾರ ಚೆಲುವೆ ಮುದ್ದು ಮಹಾಲಕ್ಷ್ಮಿಗೆ |೩|

ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ
ನಳಿತೋಳಿನಲಿ ನಾಗಮುರಿಗೆ ವಂಕಿ
ಗಿಳಿಯು ಕಮಲ ದ್ವಾರ್ಯ ಹರಡಿ ಕಂಕಣವಿಟ್ಟು
ಕಳೆಯ ಸುರಿಯೊ ಮುದ್ದು ಮಹಾಲಕ್ಷ್ಮಿಗೆ |೪|

ಗರುಡವಾಹನನ ಹೆಗಲಿಳಿದು ಶ್ರೀನಾಥ
ಹರಡಿ ಕಂಕಣ ಕರವ್-ಹಿಡಿದುಕೊಂಡು
ಮುಡಿದ ಮಲ್ಲಿಗೆ ಪಾರಿಜಾತಗಳುದುರುತ
ನಡೆದು ಬರುವ ಮುದ್ದು ಮಹಾಲಕ್ಷ್ಮಿಗೆ |೫|

ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ
ಆದರದಿಂದೆನ್ನ ಮನೆಗೆ ಬಂದು
ಶ್ರೀಧರ ಭೀಮೇಶ ಕೃಷ್ಣನೆದೆಯ ಮೇಲೆ
ವಿನೋದದಿ ಕುಳಿತಿರುವ ಮಹಾಲಕ್ಷ್ಮಿಗೆ |೬|


celvErAratiya taMdettire |pa|

huTTidaLA kShIrasAgaradali sa-
masta janarige suKava nIDutali
SrEShTharoLage jEShThAdEvi SrInAthana
paTTadarasi muddu mahAlakShmige |1|

muddu mOrege takka muKurya bulAka-
nittu vajrada buguDi vaiyAradiMda
tiddi baitale jaDe baMgAra rAgaTe
padmanABana rANi mAlakShmige |2|

saNNa muttina vOle sarapaLi caLatuMbu
cinnada sarige mOhannamAle
kaNNakADige hacci kastUri kuMkuma
cennAra celuve muddu mahAlakShmige |3|

seLenaDuvige takka biLiya pItAMbara
naLitOLinali nAgamurige vaMki
giLiyu kamala dvArya haraDi kaMkaNaviTTu
kaLeya suriyo muddu mahAlakShmige |4|

garuDavAhanana hegaliLidu SrInAtha
haraDi kaMkaNa karav-hiDidukoMDu
muDida mallige pArijAtagaLuduruta
naDedu baruva muddu mahAlakShmige |5|

pAdadi ruLi gejje nAda JEMkarisuta
AdaradiMdenna manege baMdu
SrIdhara BImESa kRuShNanedeya mEle
vinOdadi kuLitiruva mahAlakShmige |6|

Leave a Reply

Your email address will not be published. Required fields are marked *

You might also like

error: Content is protected !!