Composer : Shri Prasannavenkata dasaru
ಒಲ್ಲೆ ಯೇನಮ್ಮಾ ನಿನ ನಲ್ಲನೊಡನೆ ಕೂಡಿ ಇರ-
ಲೊಲ್ಲೆ ಯೇಕಮ್ಮಾ ಲಕುಮೆಮ್ಮಾ [ಪ]
ಪರಮ ಮಂಗಳೆ ನೀನು ಪರನಾರೇರಿಗೆ |
ದಾರಿ ತೋರುವಳಲ್ಲವೇನು ನೀನು ||
ಸುರಮುನಿ ಮೇಲಿನ ಕೋಪದಿಂದ ಶ್ರೀ |
ಹರಿಯ ತೊರೆದುದು ಉಚಿತವೇನು [೧]
ಮುಕುತಾ ಮುಕುತಳಲ್ಲವೆ ನೀ ಹರಿಯ |
ಲೋಕ ಕಾರ್ಯವ ಬಲ್ಲವಳಲ್ಲವೆ ನೀನು ||
ನಾಕವ ತೊರೆದರೆ ಶ್ರೀಕಾಂತಗೆ ನೀ |
ಬೇಕೇ ಬೇಕು ಕೇಳೀ ವಾಕು [೨]
ಜಲಚರ ವೇಷ ತೊಟ್ಟಾ ಹರಿಯು |
ಕೋಲರೂಪೂ ಧರಿಸಿದನೆಂದು ||
ಮಾಲೋಲ ಪ್ರಸನ್ವೆಂಕಟರಾಯನ್ನ |
ಮ್ಯಾಲೇತಕೆ ಈ ಮುನಿಸು ತಾಯೆ [೩]
olle yEnammA nina nallanoDane kUDi ira-
lolle yEkammA lakumemmA [pa]
parama maMgaLe nInu paranArErige |
dAri tOruvaLallavEnu nInu ||
suramuni mElina kOpadiMda SrI |
hariya toredudu ucitavEnu [1]
mukutA mukutaLallave nI hariya |
lOka kAryava ballavaLallave nInu ||
nAkava toredare SrIkAMtage nI |
bEkE bEku kELI vAku [2]
jalacara vESha toTTA hariyu |
kOlarUpU dharisidaneMdu ||
mAlOla prasanveMkaTarAyanna |
myAlEtake I munisu tAye [3]
Leave a Reply