Baro manege govinda

Composer : Shri Shripadarajaru

By Smt.Shubhalakshmi Rao

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲಿ
ವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿ
ತನಯರಿಂದ ಸಂತೋಷ ಕೆಲವರಿಗೆ ಲೋಕದಲಿ
ಇನಿತು ಸಂತೋಷ ಅವರವರಿಗಾಗಲಿ
ನಿನ್ನ ನೆನೆವೋ ಸಂತೋಷ ಎನಗಾಗಲಿ
ನಮ್ಮ ರಂಗವಿಠ್ಠಲ ||

ಕರುಣದಿ ತನುಮನಧನಂಗಳೆಲ್ಲವು
ನಿನ್ನ ಚರಣಕ್ಕೊಪ್ಪಿಸಿದ ಬಳಿಕ
ಮರಳಿ ಎನ್ನ ಮರುಳು ಮಾಡುವರೆ
ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ
ಕರುಣಾಕರ ನಿನ್ನ ಚರಣದಡಿಯೊಳಿಟ್ಟು
ಕಾಯೋ ರಂಗವಿಠಲ ||


ಬಾರೊ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ ತೋರೊ ಎನಗೆ ಮುಕುಂದ
ನಲಿದಾಡು ಮನದಲಿ | ಮಾರಪಿತ ಆನಂದ ಕಂದಾ ||ಪ||

ಚಾರುತರ ಶರೀರ ಕರುಣಾ ವಾರಿನಿಧಿ ಭವ
ಘೋರ ನಾಶನ |
ವಾರಿಜಾಸನವಂದ್ಯ ನೀರಜ ಸಾರಸದ್ಗುಣ
ಹೇ ರಮಾಪತೇ |ಅ.ಪ|

ನೋಡೋ ದಯದಿಂದೆನ್ನ ಕರಪದುಮ
ಶಿರದಲಿ ನೀಡೋ ಭಕ್ತ ಪ್ರಸನ್ನ ನಲಿದಾಡೊ ಮನದಲಿ |
ಬೇಡಿಕೊಂಬೆನೊ ನಿನ್ನ ಆನಂದ ಘನ್ನ |
ಮಾಡದಿರು ಅನುಮಾನವನು
ಕೊಂಡಾಡುವೆನು ಪಾದ ಮಹಿಮೆಗಳನು |
ಜೋಡಿಸುವೆ ಕರಗಳನು ಚರಣಕೆ ಕೂಡಿಸೋ ,
ತವ ದಾಸ ಜನರೊಳು ||೧||

ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು
ಕ್ಲೇಶ ಪಡುವುದು ಬಲ್ಲಿ ಘನ ಯುವತಿಯರ
ಸುಖ ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ |
ಏಸು ಜನುಮದ ದೋಷದಿಂದಲಿ |
ಈಸುವೆನು ಇದರೊಳಗೆ ಇಂದಿಗೆ ಮೋಸವಾಯಿತು ಆದುದಾಗಲಿ |
ಶ್ರೀಶ ನೀ ಕೈಪಿಡಿದು ರಕ್ಷಿಸು ||೨||

ನೀನೆ ಗತಿಯೆನಗಿಂದು ಉದ್ಧರಿಸೊ ಬೇಗನೆ
ದೀನಜನರಿಗೆ ಬಂಧು ನಾ ನಿನ್ನ ಸೇವಕ
ಶ್ರೀನಿವಾಸ ಎಂದೆಂದೂ ಕಾರುಣ್ಯಸಿಂಧು |
ಪ್ರಾಣಪತಿ ಹೃದಯಾಬ್ಜಮಂಟಪ
ಸ್ಥಾನದೊಳಗಭಿವ್ಯಾಪ್ತ ಚಿನ್ಮಯ |
ಧ್ಯಾನ ಗೋಚರನಾಗಿ ಕಣ್ಣಿಗೆ ಕಾಣಿಸುವೆ
ಶ್ರೀರಂಗ ವಿಠ್ಠಲ ಬಾರೊ ||೩||


maneyiMda saMtOSha kelavarige lOkadali
dhanadiMda saMtOSha kelavarige lOkadali
vaniteyiMda saMtOSha kelavarige lOkadali
tanayariMda saMtOSha kelavarige lOkadali
initu saMtOSha avaravarigAgali
ninna nenevO saMtOSha enagAgali
namma raMgaviThThala ||

karuNadi tanumanadhanaMgaLellavu
ninna caraNakkoppisida baLika
maraLi enna maruLu mADuvare
saraku oppisida myAle suMkavuMTe dEvA
karuNAkara ninna caraNadaDiyoLiTTu
kAyO raMgaviThala ||


bAro manege gOviMda ninnaMghri kamalava tOro enage mukuMda
nalidADu manadali | mArapita AnaMda kaMdA ||pa||

cArutara sharIra karuNA vArinidhi bhava
ghOra nAshana |
vArijAsanavaMdya nIraja sArasadguNa
hE ramApatE |a.pa|

nODO dayadiMdenna karapaduma
shiradali nIDO bhakta prasanna nalidADo manadali |
bEDikoMbeno ninna AnaMda ghanna |
mADadiru anumAnavanu
koMDADuvenu pAda mahimegaLanu |
jODisuve karagaLanu caraNake kUDisO ,
tava dAsa janaroLu ||1||

hEsi viShayagaLalli toLalADi nA balu
klEsha paDuvudu balli ghana yuvatiyara
suKa lEsu eMbudanu kolli Ase biDisilli |
Esu janumada dOShadiMdali |
Isuvenu idaroLage iMdige mOsavAyitu AdudAgali |
shrIsha nI kaipiDidu rakShisu ||2||

nIne gatiyenagiMdu uddhariso bEgane
dInajanarige baMdhu nA ninna sEvaka
shrInivAsa eMdeMdU kAruNyasiMdhu |
prANapati hRudayAbjamaMTapa
sthAnadoLagabhivyApta cinmaya |
dhyAna gOcaranAgi kaNNige kANisuve
shrIraMga viThThala bAro ||3||

Leave a Reply

Your email address will not be published. Required fields are marked *

You might also like

error: Content is protected !!