Composer : Shri Vidyaratnakara Tirtharu
ಬಾರೋ ಕ್ಷೀರೋದಧಿಶಯನ ಹರೇ ನಿನ್ನ
ಕರುಣವ ಎನ್ನೊಳು ತೋರೋ || ಪ ||
ನಂದನಂದ ಹೃನ್ಮಂದಿರಕೆ ನೀ ಬೇಗ ಬಾರೋ || ಅ.ಪ ||
ಶೌರೇ ನಿಂಗೆ ಸೇರಿದಾವನಾಗಿ
ಇನ್ಯಾರೀಗೆ ಬೇಡಲೋ ಮುರಾರೇ ಕರುಣಿಸಿ ಬಾರೋ ||೧||
ಕೃಷ್ಣಾಮೂರ್ತೆ ಸೃಷ್ಟಿ ಪಾಲನಾಗಿ
ಪರಮೇಷ್ಠಿ ಜನಕ ನಿಂಗಿಷ್ಟೂಪೇಕ್ಷೆ ಯಾಕೋ || ೨ ||
ಇಂದಿರೇಶ ಚಂದಿರವದನ
ಮುಚುಕುಂದವರದ ಗೋವಿಂದ ಕರುಣಿಸಿ ಬಾರೋ || ೩ ||
ಮಂಗಳಾಂಗ ಅಂಗಜಜನಕ
ಯದುಪುಂಗವ ಕೈಬಿಡದಾಂಗೆ ಪಾಲಿಸು || ೪ ||
ನಾಮಗಿರಿ ಸ್ವಾಮೀ ನಾರಸಿಂಹ
ಬಲರಾಮಸೋದರ ಪ್ರಣಾಮ ಮಾಡುವೆ ಬಾರೋ || ೫ ||
bArO kShIrOdadhiSayana harE ninna
karuNava ennoLu tOrO || pa ||
naMdanaMda hRunmaMdirake nI bEga bArO || a.pa ||
SaurE niMge sEridAvanAgi
inyArIge bEDalO murArE karuNisi bArO ||1||
kRuShNAmUrte sRuShTi pAlanAgi
paramEShThi janaka niMgiShTUpEkShe yAkO || 2 ||
iMdirESa caMdiravadana
mucukuMdavarada gOviMda karuNisi bArO || 3 ||
maMgaLAMga aMgajajanaka
yadupuMgava kaibiDadAMge pAlisu || 4 ||
nAmagiri svAmI nArasiMha
balarAmasOdara praNAma mADuve bArO || 5 ||
Leave a Reply