Composer : Shri Jayesha vittala
ಮಧುಹಾ ನಿನಗರ್ಪಿತವೊ ಸರ್ವಕರ್ಮ ||ಪ||
ಉದಯಾದಿ ಶಯನಾಂತ ಕೃತ ಕರ್ಮದನುಭವವ ||ಅ.ಪ||
ಸ್ಮೃತಿ ವಿಸ್ಮೃತಿಯಲಿ ಕೃತ ಉತ್ತಮಾಧಮ ಕರ್ಮ
ಮತ್ತೆ ಅನುಭವಿಸಿದ ಸುಖ ದು:ಖಗಳಿಗೆ
ಚಿತ್ತ ನಿನ್ನದು ಮೂಲ ಸರ್ವ ಸ್ತಿತಿಗತಿ ಧರ್ಮ
ವೃತ್ತಿಗಳಿಗನವರತ ಸತ್ಯ ಸಂಕಲ್ಪನೆ [೧]
ನೀನೆಮ್ಮನಿಟ್ಟಪರಿ ನಿನ್ನಿಷ್ಟವಾಗಿರಲು
ನಾನ್ನಿಷ್ಟೆ ಎನಲ್ಯಾಕೊ ಪ್ರೇಷ್ಠತಮನೆ
ವಾಣೀಶ ಹರ ಸುರರು ನಿನ್ನ ಪ್ರೀತಿಗಾಗಿ
ಏನು ಕೊಟ್ಟದು ಮುದದಿ ಉಂಡು ನಿನಗರ್ಪಿಪರೊ [೨]
ಅಧಿಕಾರಿ ನಾನಲ್ಲ ಅದರಿಂದ ಬೆದರುವೆನು
ಮದನನಯ್ಯನೆ ಮುದದಿ ಮನ್ನಿಸೆನ್ನ
ಉದಯಾದಿ ಶಯನಾಂತ ಜಯೇಶವಿಠ್ಠಲ
ಮುದಖೇದಗಳು ನಿನ್ನ ಪ್ರೀತಿಗೊದಗಲೋ ಸ್ವಾಮಿ [೩]
madhuhaa ninagarpitavo sarvakarma ||pa||
udayAdi shayanAMta kRuta karmadanubhavava ||a.pa||
smRuti vismRutiyali kRuta uttamAdhama karma
matte anubhavisida sukha du:khagaLige
citta ninnadu mUla sarva stitigati dharma
vRuttigaLiganavarata satya saMkalpane [1]
nInemmaniTTapari ninniShTavAgiralu
nAnniShTe enalyAko prEShThatamane
vANIsha hara suraru ninna prItigAgi
Enu koTTadu mudadi uMDu ninagarpiparo [2]
adhikAri nAnalla adariMda bedaruvenu
madananayyane mudadi mannisenna
udayAdi shayanAMta jayESaviThThala
mudakhEdagaLu ninna prItigodagalO svAmi [3]
Leave a Reply