Enu karanadinda malagiruviyo

Composer : Shri Vijaya dasaru

Smt.Lakshmi

ಏನು ಕಾರಣದಿಂದ ಮಲಗಿರುವೆಯೋ ಶ್ರೀನಾಥ (ಪ.)
ರಘುಕುಲೋದ್ಭವ ದರ್ಭಶಯನ (ಅ.ಪ.)

ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋ
ಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋ
ಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋ
ಜ್ಯೋತಿರ್ಮಯ ರೂಪ ಹೇ ದರ್ಭಶಯನ |೧|

ವನವಾಸ ತಿರುಗಲಾರೆನೆಂದು ನೀ ಮಲಗಿದೆಯೋ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೋ
ದನುಜ ಬಲ್ಲಿದನು ಎಂಬೋ ವ್ಯಾಕುಲದಿ ಮಲಗಿದೆಯೋ
ಹನುಮ ವಂದಿತ ಪಾದ ಹೇ ದರ್ಭಶಯನ | ೨|

ಅನಲಕ್ಶ ಹರನಿಗೆ ಕರುಣಿಸಿ ಮಲಗಿದೆಯೋ
ವನಜ ಸಂಭವಗೆ ನೀನೊಲಿದು ಬಂದು ಮಲಗಿದೆಯೋ
ಮುನಿಗಳ ಸ್ತೋತ್ರಕ್ಕೆ ಹಿಗ್ಗಿ ನೀ ಮಲಗಿದೆಯೋ
ಎನಗೊಲಿದ ವಿಜಯ ವಿಠಲ ದರ್ಭಶಯನ | ೩|


Enu kAraNadiMda malagiruveyO SrInAtha (pa.)
raGukulOdBava darBaSayana (a.pa.)

sIte pOdaLu eMdu ciMteyali malagideyO
sEtugaTTuvudu asAdhyaveMdu malagideyO
kOtigaLa kaili raNavAgadeMdu malagideyO
jyOtirmaya rUpa hE darBaSayana |1|

vanavAsa tirugalAreneMdu nee malagideyO
vanadhISa mArgavanu koDaneMdu malagideyO
danuja ballidanu eMbO vyAkuladi malagideyO
hanuma vaMdita pAda hE darBaSayana |2|

analaksha haranige karuNisi malagideyO
vanaja saMBavage nInolidu baMdu malagideyO
munigaLa stOtrakke higgi nee malagideyO
enagolida vijaya viThala darBaSayana |3|

Leave a Reply

Your email address will not be published. Required fields are marked *

You might also like

error: Content is protected !!