Composer : Shri Khadri Narasimha
ಶ್ರೀಮದ್ ರಘುಕುಲ ನಾಯಕ ಜಯ ಜಯ
ಕಾಮಿತ ಶುಭ ಫಲದಾಯಕ ಜಯ ಜಯ [ಪ]
ಪರಮಾತ್ಮ ಹರಿ ಕೇಶವ ಜಯ ಜಯ
ಪರಿಹರಿಸೈ ಭವ ಕ್ಲೇಶವ ಜಯ ಜಯ |
ಕರುಣಾಕರ ನಾರಾಯಣ ಜಯ ಜಯ
ವರದ ನಿಗಮ ಪಾರಾಯಣ ಜಯ ಜಯ |೧|
ಭಕ್ತಜನ ಪ್ರಿಯ ಮಾಧವ ಜಯ ಜಯ
ಮುಕ್ತಿಜನಾಶ್ರಯ ಭೂದವ ಜಯ ಜಯ |
ಮನ್ಮಥಪಿತ ಗೋವಿಂದನೆ ಜಯ ಜಯ
ಚಿನ್ಮಯ ರುಪಾನಂದನೆ ಜಯ ಜಯ |೨|
ವಿಶ್ವಾಧೀಶ್ವರ ವಿಷ್ಣುವೆ ಜಯ ಜಯ
ವಿಶ್ವಾವನವರ ದಿಷ್ಣುವೆ ಜಯ ಜಯ
ಸುಜನ ಸ್ತುತ ಮಧುಸುದನ ಜಯ ಜಯ
ತ್ರಿಜಗತ್ ಪತಿ ಸುರ ಮೋದನ ಜಯ ಜಯ |೩|
ವಿಧಿಭವ ವಂದ್ಯ ತ್ರಿವಿಕ್ರಮ ಜಯ ಜಯ
ಅಧಿಕಭುಜ ಬಲ ಪರಾಕ್ರಮ ಜಯ ಜಯ |
ವನಜ ದಳಾಂಬಕ ವಾಮನ ಜಯ ಜಯ
ವನನಿಧಿ ತಲ್ಪಕ ನಾಮನೆ ಜಯ ಜಯ |೪|
ಶ್ರೀನಾಯಕ ಸುರ ಶ್ರೀಧರ ಜಯ ಜಯ
ಭೂನಾಯಕ ಸುರ ಭೂಧರ ಜಯ ಜಯ |
ಇಂದುಮುಖನೆ ಹ್ರಿಷಿಕೇಶನೆ ಜಯ ಜಯ
ಕುಂದರದನ ಜಗದೀಶನೆ ಜಯ ಜಯ |೫|
ನಗಧರನೆ ಪದ್ಮನಾಭನೆ ಜಯ ಜಯ
ಸುಗುಣನೆ ದುರ್ದಳಳಾಭನೆ ಜಯ ಜಯ |
ಮುನಿಜನನುತ ದಾಮೋದರ ಜಯ ಜಯ
ವಿನಮಿತ ಭವ್ಯ ಸಹೋದರ ಜಯ ಜಯ |೬|
ಸವನಾವನ ಸಂಕರುಷನ ಜಯ ಜಯ
ಕವಿಜನ ಚಿತ್ತಾಕರ್ಷಣ ಜಯ ಜಯ |
ವಾಸುದೇವ ಪರಮೇಶ್ವರ ಜಯ ಜಯ
ವಾಸುಕಿ ಶಯನನೆ ಶ್ರೀಶ್ವರ ಜಯ ಜಯ |೭|
ಪಾಲಿಸು ಎನ್ನ ಪ್ರದ್ಯುಮ್ನನೆ ಜಯ ಜಯ
ಪಾಲಿಸಿದಿಂದ್ರದ್ಯುಮ್ನನೆ ಜಯ ಜಯ |
ಸಕಲಾತ್ಮಕ ಅನಿರುದ್ಧನೆ ಜಯ ಜಯ
ಭಕುತರ ಪಾಪನಿರುದ್ಧನೆ ಜಯ ಜಯ |೮|
ಪಕ್ಷಿಗಮನ ಪುರುಷೋತ್ತಮ ಜಯ ಜಯ
ರಕ್ಷಿಸೊ ಹರಿ ಸರ್ವೋತ್ತಮ ಜಯ ಜಯ |
ವನಸೋದರನೆ ಅಧೋಕ್ಷಜ ಜಯ ಜಯ
ಅನಘನೆ ಸುರರಿಪು ಸಿಕ್ಷನೆ ಜಯ ಜಯ |೯|
ಕರುಣಿಸು ಲಕ್ಷ್ಮಿ ನರಸಿಂಹನೆ ಜಯ ಜಯ
ಶರಣು ಪರಾಕು ನೃಸಿಂಹನೆ ಜಯ ಜಯ |
ಪಾಲಿಸು ಬಿನ್ನಪ ಅಚ್ಯುತ ಜಯ ಜಯ
ಪಾಲಿಪುದೆಮ್ಮನು ಮೆಚ್ಚುತ ಜಯ ಜಯ |೧೦|
ಮೊರೆಯ ಹೊಕ್ಕೆನೊ ಜನಾರ್ದನ ಜಯ ಜಯ
ಮರೆಯದೆ ಪೊರೆ ಮುರಮರ್ದನ ಜಯ ಜಯ |
ಬಣ್ಣಿಸಲರಿಯೆ ಉಪೇಂದ್ರನೆ ಜಯ ಜಯ
ಚಿನ್ನನು ನಾ ಗುಣಸಂದ್ರನೆ ಜಯ ಜಯ |೧೧|
ತಂದೆ ತಾಯಿ ನೀನೆ ಹರಿ ಜಯ ಜಯ
ಬಂಧು ಬಳಗ ನೀನೆ ಸರಿ ಜಯ ಜಯ |
ನಂಬಿದೆ ಪೊರೆಯೈ ಕೃಷ್ಣನೆ ಜಯ ಜಯ
ಬೆಂಬಿಡಬೇಡ ಸುಕೃಷ್ಣನೆ ಜಯ ಜಯ |೧೨|
ಮಂಗಳ ಮಹಿಮ ರಘೂದ್ಭವ ಜಯ ಜಯ
ಮಂಗಳ ಖಗಪತಿ ವಾಹನ ಜಯ ಜಯ |
ಮಂಗಳ ಜಲದ ಸುಮಾಂಗನೆ ಜಯ ಜಯ
ಮಂಗಳ ಖಾದ್ರಿ ನೃಸಿಂಹನೆ ಜಯ ಜಯ |೧೩|
shrImad raghukula nAyaka jaya jaya
kAmita shubha phaladAyaka jaya jaya [pa]
paramAtma hari kEshava jaya jaya
pariharisai bhava klEshava jaya jaya |
karuNAkara nArAyaNa jaya jaya
varada nigama pArAyaNa jaya jaya |1|
bhaktajana priya mAdhava jaya jaya
muktijanAshraya bhUdava jaya jaya |
manmathapita gOviMdane jaya jaya
chinmaya rupAnaMdane jaya jaya |2|
vishwAdheeshwara viShNuve jaya jaya
vishwAvanavara diShNuve jaya jaya
sujana stuta madhusudana jaya jaya
trijagat pati sura mOdana jaya jaya |3|
vidhibhava vaMdya trivikrama jaya jaya
adhikabhuja bala parAkrama jaya jaya |
vanaja daLAMbaka vAmana jaya jaya
vananidhi talpaka nAmane jaya jaya |4|
shrInAyaka sura shrIdhara jaya jaya
bhUnAyaka sura bhUdhara jaya jaya |
iMdumukhane hriShikEshane jaya jaya
kuMdaradana jagadeeshane jaya jaya |5|
nagadharane padmanAbhane jaya jaya
suguNane durdaLaLAbhane jaya jaya |
munijananuta dAmOdara jaya jaya
vinamita bhavya sahOdara jaya jaya |6|
savanAvana saMkaruShana jaya jaya
kavijana chittAkarShaNa jaya jaya |
vAsudEva paramEshwara jaya jaya
vAsuki shayanane shrIshwara jaya jaya |7|
pAlisu enna pradyumnane jaya jaya
pAlisidiMdradyumnane jaya jaya |
sakalAtmaka aniruddhane jaya jaya
bhakutara pApaniruddhane jaya jaya |8|
pakShigamana puruShOttama jaya jaya
rakShiso hari sarvOttama jaya jaya |
vanasOdarane adhOkShaja jaya jaya
anaghane suraripu sikShane jaya jaya |9|
karuNisu lakShmi narasiMhane jaya jaya
sharaNu parAku nRusiMhane jaya jaya |
pAlisu binnapa achyuta jaya jaya
pAlipudemmanu mecchuta jaya jaya |10|
moreya hokkeno janArdana jaya jaya
mareyade pore muramardana jaya jaya |
baNNisalariye upEMdrane jaya jaya
chinnanu nA guNasaMdrane jaya jaya |11|
taMde taayi nIne hari jaya jaya
baMdhu baLaga nIne sari jaya jaya |
naMbide poreyai kRuShNane jaya jaya
beMbiDabEDa sukRuShNane jaya jaya |12|
maMgaLa mahima raghUdbhava jaya jaya
maMgaLa khagapati vAhana jaya jaya |
maMgaLa jalada sumAMgane jaya jaya
maMgaLa khAdri nRusiMhane jaya jaya |13|
Leave a Reply