Composer : Shri Lakumeesha ankita on Shri Upendra Tirtharu [Rayara Matha]
Shri Upendra Tirtharu : 1725-1728
ಕೃಪಾರಸಾಮೃತಾಂಬೋಧಿಮಪಾರ ಮಹಿಮಾನ್ವಿತಮ್ |
ಉಪಾಸ್ಮಹೇ ತಪೋಮೂರ್ತಿಮುಪೇಂದ್ರಮುನಿ ಪುಂಗವಂ ||
Vrundavana – Srirangam
Aradhana – Margashira Bahula Ashtami
ಹಿಂಗದೆ ನೀ ಭಜಿಸೋ
ಈ ಮೌನಿ ಪದಗಳ, ಹಿಂಗದೆ ನೀ ಭಜಿಸೊ [ಪ]
ಮಂಗಳವೀವ ಶ್ರೀರಂಗ ಸುಕ್ಷೇತ್ರದಿ
ಕಂಗೊಳಿಸುವ ಮುನಿಪುಂಗವ ಉಪೇಂದ್ರಾ [ಅ.ಪ]
ಅಜಭಾವಿ ಶಾಸ್ತ್ರದಿ ನಿಜ ಪಂಡಿತರಾದ
ವಿಜಯೀಂದ್ರಾಚಾರ್ಯರ ಕರೆದಾಶ್ರಮವಿತ್ತೂ
ವಿಜಯಿ ಶ್ರೀ ಸುಮತೀಂದ್ರ ಯತಿಗಳ
ಅಜಕರಾರ್ಚಿತ ಮೂಲರಾಮನ [೧]
ಸದಮಲ ಸನ್ಯಾಸ ವಿಧಿಯಲ್ಲಿ ಬಾಳುತ
ಸದ್ಭಾಷ್ಯ ವಿಧಿಸೂತ್ರ ಸುಧಾದಿಗಳ
ಪೇಳುತ್ತ, ಅಧಮ ದುರ್ವಾದಿಗಳ ಓಡಿಸಿ
ಮುದದಿ ರಾಮನ ಪಾದವ ಪೂಜಿಸಿ
ಹೃದಯದಲ್ಲಿ ಹರಿಯ ಧ್ಯಾನಿಸಿ |
ಒದಗಿ ಸುಜನರ ಬಿಡದೆ ಪೊರೆವ [೨]
ಆನಂದ ಶಾಸ್ತ್ರಾಬ್ಧಿ ಮೀನ ಶ್ರೇಷ್ಠರಾದ
ಶ್ರೀನಿವಾಸಾಚಾರ್ಯರ ಕರೆಯುತಲೀ
ಜಾನಕೀಶ ಲಕುಮೀಶನಾಜ್ಞೆಯಲಿ |
ಸಾನುಮತದಿ ಸನ್ಯಾಸವೀಯುತ
ಜ್ಞಾನಿ ಅಷ್ಟಮಿ ಮಾರ್ಗಶಿರವದ್ಯ |
ತಾಣ ವೃಂದಾವನವ ಸೇರ್ದರ [೩]
hiMgade nI BajisO
I mauni padagaLa, hiMgade nI Bajiso [pa]
maMgaLavIva SrIraMga sukShEtradi
kaMgoLisuva munipuMgava upEMdrA [a.pa]
ajaBAvi SAstradi nija paMDitarAda
vijayIMdrAcAryara karedASramavittU
vijayi SrI sumatIMdra yatigaLa
ajakarArcita mUlarAmana [1]
sadamala sanyAsa vidhiyalli bALuta
sadBAShya vidhisUtra sudhAdigaLa
pELutta, adhama durvAdigaLa ODisi
mudadi rAmana pAdava pUjisi
hRudayadalli hariya dhyAnisi |
odagi sujanara biDade poreva [2]
AnaMda SAstrAbdhi mIna SrEShTharAda
SrInivAsAcAryara kareyutalI
jAnakISa lakumISanAj~jeyali |
sAnumatadi sanyAsavIyuta
j~jAni aShTami mArgaSiravadya |
tANa vRuMdAvanava sErdara [3]
Leave a Reply