Angaladolu Ramanadida

Composer : Shri Kanakadasaru

By Smt.Shubhalakshmi Rao

ಅಂಗಳದೊಳು ರಾಮ ನಾಡಿದ
ಚಂದ್ರ ಬೇಕೆಂದು ತಾ ಹಟ ಮಾಡಿದಾ |ಪ|

ತಾಯಿಯ ಕರೆದು ಕೈಮಾಡಿ ತೋರಿದಾ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ – ರಾಮ
ಚಿಣಿಕೋಲು ಚಂಡು ಬುಗುರಿ ಎಲ್ಲವ
ಬೆಡ ಬೆಡ ಎಂದು ತಾ ಬಿಸಾಡಿದಾ || ೧ ||

ಕನ್ದ ಬಾ ಎನ್ದು ತಾಯಿ ಕರೆದಳು
ಮಮ್ಮು ಉಣ್ಣೆಂದು ಬಣ್ಣಿಸುತಿದ್ದಳು – ತಾಯಿ
ತಾಯಿ ಕೌಸಲ್ಯ ಕಳವಳ ಗೊಂಡಳು
ಕನ್ದ ಅಂಜಿದನು ಎನ್ನು ತಿದ್ದಳು || ೨ ||

ಅಳುವ ಧ್ವನಿ ಕೇಳಿ ರಾಜನು
ಮಂತ್ರಿ ಸಹಿತಾಗಿ ಧಾವಿಸಿ ಬನ್ದನು – ರಾಜಾ
ನಿಲುವ ಕನ್ನಡಿ ತಂದಿರಿಸಿದಾ
ಶ್ರೀ ರಾಮನ್ನ ಎತ್ತಿ ಮುದ್ದಾಡಿದಾ || ೩ ||

ಕನ್ನಡಿಯೊಳು ಬಿಂಬ ನೋಡಿದಾ ,
ರಾಮಾ ನೋಡಿದಾ ಶ್ರೀ ರಾಮಾ ನೋಡಿದಾ
ಚಂದ್ರ ಸಿಕ್ಕಿದನೆಂದು ಕುಣಿದಾಡಿದಾ – ರಾಮಾ
ಈ ಸಂಭ್ರಮ ನೋಡಿ ಆದಿಕೇಶವ
ರಘು ವಂಶವನ್ನೇ ಕೊನ್ಡಾಡಿದಾ || ೪ ||


aMgaLadoLu rAma nADida
chaMdra bEkeMdu taa haTa mADidA |pa|

taayiya karedu kaimADi tOridA
mugila kaDegomme diTTisi nODida – raama
chiNikOlu chaMDu buguri ellava
beDa beDa eMdu tA bisADidA || 1 ||

kanda bA endu tAyi karedaLu
mammu uNNeMdu baNNisutiddaLu – taayi
tAyi kousalya kaLavaLa goMDaLu
kanda aMjidanu ennu tiddaLu || 2 ||

aLuva dhvani kELi rAjanu
maMtri sahitAgi dhAvisi bandanu – rAjA
niluva kannaDi taMdirisidA
shrI rAmanna etti muddADidA || 3 ||

kannaDiyoLu biMba nODidA ,
rAmA nODidA shrI rAmA nODidA
chaMdra sikkidaneMdu kuNidADidA – rAmA
ee saMBrama nODi AdikEshava
raghu vaMshavannE konDADidA || 4 ||

Leave a Reply

Your email address will not be published. Required fields are marked *

You might also like

error: Content is protected !!