Composer : Shri Tande purandara vittala
Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi
ಕಾಣೆನೊ ನಿನ್ನ ಸರಿ ಗುರುವೇ |ಪ|
ಕಾಣೆನೋ ನಿನ್ನ ಸರಿ ದೀನರಕ್ಷಕ ಜನ
ಮಾನದಿಂ ಸಲಹಯ್ಯ ಜ್ಞಾನಿಗಳ ತಿಲಕನೇ ||ಅ.ಪ||
ದಕ್ಷಿಣ ಪಿನಾಕಿನಿ ತೀರದಲೊಪ್ಪುವ ಭುವಿ
ಕುಕ್ಷಿಯೊಳಗೆ ಇದ್ದು ರಕ್ಷಿಸು ಎನ್ನನೂ |೧|
ಹೇಯ ಮಾನವನು ನಾನು ಬೇಡುವೆ ನಿನ್ನನು
ಜ್ಞಾನ ಭಕ್ತಿ ವೈರಾಗ್ಯವ ಕರುಣಿಸೋ |೨|
ಕರವ ನೀಡುತ ಬರುವ ದಾಸರಿಗೇ ವರವೀವ
ಕರ ಕಲಿಸಿಕೊಂಡ ಎನ್ನ ನಾಥಾ ರಘೂತ್ತಮಾ |೩|
ಭಕ್ತರ ವೃಂದಕ್ಕೆ ಆಶ್ರಯವಾಗಿಪ್ಪ
ಶಕ್ತಿವಂತ ಮಹಾಪಾವನ ಚರಿತನೆ |೪|
ತಂದೆ ಪುರಂದರ ವಿಠಲನ ದಾಸ
ಬಂದೆನ್ನ ಅಘಗಳ ಕಳೆದು ಪೊರೆಯೋದಾತಾ |೫|
kANeno ninna sari guruvE |pa|
kANenO ninna sari dInarakShaka jana
mAnadiM salahayya j~jAnigaLa tilakanE ||a.pa||
dakShiNa pinAkini tIradaloppuva Buvi
kukShiyoLage iddu rakShisu ennanU |1|
hEya mAnavanu nAnu bEDuve ninnanu
j~jAna Bakti vairAgyava karuNisO |2|
karava nIDuta baruva dAsarigE varavIva
kara kalisikoMDa enna nAthA raGUttamA |3|
Baktara vRuMdakke ASrayavAgippa
SaktivaMta mahApAvana caritane |4|
taMde puraMdara viThalana dAsa
baMdenna aGagaLa kaLedu poreyOdAtA |5|
Leave a Reply