Nodide gurugaLa

Composer : Shri Shrida vittala

By Smt.Shubhalakshmi Rao

Shri Raghuttama Tirtha – 1548 – 1596
Manampoondi,Tirukoilur -TN
bhAvabodhakR^itaM seve
raghuttamamahAgurum |
yacChiShyashiShyashiShyAdyAH
TippaNyAcAryasaMj~nitAH |
Aradhane : Pousha Shukla Ekadashi


ನೋಡಿದೆ ಗುರುಗಳ ನೋಡಿದೆ |ಪ|
ನೋಡಿದೆನು ಗುರುಗಳ ಪಾದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದಣಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ |ಅ.ಪ|

ಪಂಚ ಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತು
ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು
ಪಂಚ ಬಾಣಣ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ (೧)

ಅಲವಬೋಧರ ಭಾಷ್ಯ ಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಷ ಮತಗಿರಿ ಸಮುದಾಯಂಗಳ ಕುಲಿಶದಂದಲಿ ಖಂಡಿಸುತಲಿ
ಮೂಲರಾಮ ದಿಗ್ವಿಜಯ ರಾಮರ ಪಾದಕಮಲಕೆ ಭೃಂಗನೆನಿಸುತ
ಶೀಲಭಕ್ತಿ ವಿರಕ್ತಿ ಮತಿಗಳ ಪಾಲಿಸುತ ಯತಿಮೌಳಿ ರತುನರ (೨)

ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮೆರೆವರ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ (೩)


nODide gurugaLa nODide |pa|
nODidenu gurugaLa pAdAbjava
pADidenu sanmahimegaLa nA
bEDidenu manadaNiye varagaLa
IDu illade koDuva praBugaLa |a pa.|

paMca kRuShNAraNya kShEtra pinAkiniya tIradalli niMtu
miMcutiha kAShAyadaMDa kamaMDalava dharisutta dhareyoLu
paMca bANaNa pitana guNagaLa aMceyadi pogaLutta haruShadi
saMcitAgAmigaLa kaLedu prapaMcadali merevaMtha gurugaLa (1)

alavabOdhara BAShya TIkA BAvavanu sujanarige bOdhisi
kaluSha matagiri samudAyaMgaLa kuliSadaMdali KaMDisutali
mUlarAma digvijaya rAmara pAdakamalake BRuMganenisuta
SIlaBakti virakti matigaLa pAlisuta yatimauLi ratunara (2)

kAmadhEnu sukalpataru ciMtAmaNiyavOl kAmitArthava
prEmadali bIrutta adhyAtmadi tApatraya kaLeyuva
svAmi SrIhari SrIdaviThalana dAsAgraNiyenisi merevara
nEmadiMdali SrI raGUttama maunivaryara karuNa bayasuta (3)

Leave a Reply

Your email address will not be published. Required fields are marked *

You might also like

error: Content is protected !!