Composer : Shri Gopala dasaru
ರಾಮ ದೂತನ ಪಾದ ತಾಮರಸವ ಕಂಡ
ಆ ಮನುಜನೇ ಧನ್ಯನೋ ||
ಶ್ರೀಮನೋಹರನಂಘ್ರಿ ಭಜಕ |
ಸ್ತೋಮ ಕುಮುದಕೆ ಸೋಮನೆನಿಸುವ |
ಭೂಮಿಯೋಳು ಯದುಗಿರಿಯ ಸೀಮೆಯ ||
ಕಾಮವರದೊಳು ಪ್ರೇಮದಿಂದಿಹ || ಅ.ಪ ||
ಕೋತಿ ರೂಪದಿ ರಘುನಾಥನಾಜ್ಞೇಯ ತಾಳಿ |
ಪಾಥೋಧಿಯ ಲಂಘಿಸಿ
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ
ಮಾತೆಯನು ಕಂಡೆರಗಿ ದಶಮುಖ |
ಪೋತ ಖಳಕುಲವ್ರಾತ ಘಾತಿಸಿ |
ಸೀತ ವಾರ್ತೆಯ ನಾಥಗರುಹಿದ || ೧ ||
ಪಾಂಡುಸುತನೆ ಪ್ರಚಂಡ ಗಾದೆಯನು
ದೋರ್ದಂಡದಿ ಧರಿಸುತಲಿ |
ಮಂಡಲದೊಳು ಭಂಡ ಕೌರವ |
ಚಂಡ ರಿಪುಗಳ ಖಂಡಿಸಿ ಶಿರ ||
ಚಂದನಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದುದ್ದಂಡ ವಿಕ್ರಮ ||೨||
ಧಾರುಣಿ ಯೊಳು ದ್ವಿಜ ನಾರಿ ಗರ್ಭದಿ ಬಂದು
ಮೂರೋಂದಾಶ್ರಮ ಧರಿಸಿ |
ಧೀರನೀನೇಳಧಿಕ ತ್ರಿದಶ
ಸಾರ ಗ್ರಂಥಗಳ ವಿರಚಿಸುತ ಮಹಾ
ಶೂರ ಶ್ರೀ ಗೋಪಾಲ ವಿಠಲನ
ಚಾರು ಚರಣಕೆ ಅರ್ಪಿಸಿದ ಗುರು ||೩||
rAma dUtana pAda tAmarasava kaMDa
A manujanE dhanyanO ||
SrImanOharanaMghri Bajaka |
stOma kumudake sOmanenisuva |
BUmiyOLu yadugiriya sImeya ||
kAmavaradoLu prEmadiMdiha || a.pa ||
kOti rUpadi raGunAthanAj~jEya tALi |
pAthOdhiya laMGisi
KyAta laMkeya pokku SOdhisi
mAteyanu kaMDeragi daSamuKa |
pOta KaLakulavrAta GAtisi |
sIta vArteya nAthagaruhida || 1 ||
pAMDusutane pracaMDa gAdeyanu
dOrdaMDadi dharisutali |
maMDaladoLu BaMDa kaurava |
caMDa ripugaLa KaMDisi Sira ||
caMdanADi satige karuLina
daMDe muDisiduddaMDa vikrama ||2||
dhAruNi yoLu dvija nAri garBadi baMdu
mUrOMdASrama dharisi |
dhIranInELadhika tridasha
sAra graMthagaLa viracisuta mahA
SUra SrI gOpAla viThalana
cAru caraNake arpisida guru ||3||
Leave a Reply