Jaya Vayu Hanumanta

Composer: Shri Vyasarajaru

Shri Anantharam & grp

ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ [ಪ]

ಅಂಜನೆಯಲಿ ಹುಟ್ಟಿ ಅಂದು ರಾಮರ ಸೇವೆ
ನಂದದಿಂದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ [೧]

ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ [೨]

ಕಲಿಯುಗದ ಬಲು ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ
ಕಲಿಯನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀ ಕೃಷ್ಣ ಪರನೆಂದೆ [೩]


jaya vAyu hanumaMta jaya BIma balavaMta
jaya pUrNa mativaMta jaya salahO saMta [pa]

aMjaneyali huTTi aMdu rAmara sEve
naMdadiMdali mADi kapi balava kUDi
siMdhu laMGisi kaLara vanava BaMgisi sIte
guMgurava koTTe laMkApurava suTTe [1]

dvAparAMtyadi pAMDu BUpanAtmajanenisi
SrI pArthasArathiya Bajaka nInAde
pApi mAgadha bakara kIcaka hiDiMbakara
kOpadiMdali taride mUrjagadi merede [2]

kaliyugada balu kaLLarudisi durmatagaLanu
balisi SrI hariya guNagaLanu maresi
kaliyanusarisalu guruvAgi avatarisi
KaLara durmata muride SrI kRuShNa paraneMde [3]

Leave a Reply

Your email address will not be published. Required fields are marked *

You might also like

error: Content is protected !!