Bheemanembuvange

Composer : Shri Kanakadasaru

By Smt.Shubhalakshmi Rao

ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ [ಪ]
ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ [ಅ]

ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯ
ಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ (೧)

ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ –
ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ (೨)

ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯ
ಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ(೩)

ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯ
ಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ (೪)

ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯ
ತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ (೫)


BImaneMbuvaMge yAtara Bayavilla BImarAya [pa]
kAmita PalagaLa koTTu nI salahayya BImarAya [a]

aMjaneyAtmaja agaNita balavaMta BImarAya
kaMjanABana dUta karuNiso balavaMta BImarAya (1)

kaTTida pUmAle kastUri nAmada BImarAya –
poMbaTTe pItAMbaravanuTTu merevaMtha BImarAya (2)

vAridhiyanu dATi sIteguMguravitta BImarAya
sUriveggaLatana kittu IDADida BImarAya(3)

rAmarAyarige nI prEmada baMTanu BImarAya
kAmita Palavittu karuNadi salahayya BImarAya (4)

Cappanna dESakke oppuva kAgineleya BImarAya
tappade kanakage varagaLa koDuvaMtha BImarAya (5)

Leave a Reply

Your email address will not be published. Required fields are marked *

You might also like

error: Content is protected !!