Composer : Shri Purandara dasaru
ಗೋಕುಲದ ಗೋಪಿಯರು ಏಸು ಧನ್ಯರೋ |
ಶ್ರೀಕಾಂತನನುರಾಗದಲಿ ಪಾಡುತಿಹರೊ [ಪ]
ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |
ತಳಿಸಾರಣಿ ಸಮ್ಮಾರ್ಜಿಸುವಾಗ ||
ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |
ಬೆಳಗು ಜಾವದಿ ಮೊಸರ ಕಡೆವಾಗಲು [೧]
ನಡೆವಾಗ ನುಡಿವಾಗ ಭೋಜನವ ಮಾಡುವಾಗ |
ಉಡುವಾಗ ಆಭರಣ ತೊಡುವಾಗಲು ||
ಮುಡಿವಾಗ ಮಲ್ಲಿಗೆ ಉಯ್ಯಲೆ ಆಡುವಾಗ |
ಅಡಿಗಡಿಗೆ ತಾಂಬೂಲ ಮೆಲುವಾಗಲು [೨]
ಪರಿಪರಿ ರಾಗದಿಂದ ಪರಿಪರಿ ಮಾತಿನಿಂದ |
ಪರಿಪರಿ ಗೀತ ಪ್ರಸಂಗದಿಂದ ||
ಪರಿಪೂರ್ಣನಾದ ಶ್ರೀ ಪುರಂದರವಿಠ್ಠಲನ |
ಹಿರಿದಾಗಿ ಮನದೊಳಗೆ ಸ್ಮರಿಸುತಿಹರು [೩]
gOkulada gOpiyaru Esu dhanyarO |
SrIkAMtananurAgadali pADutiharo [pa]
kuLitu karevAga niMtu kaLavegaLa kuTTuvAga |
taLisAraNi sammArjisuvAga ||
aLuva makkaLa toTTiloLiTTu tUguvAga |
beLagu jAvadi mosara kaDevAgalu [1]
naDevAga nuDivAga BOjanava mADuvAga |
uDuvAga ABaraNa toDuvAgalu ||
muDivAga mallige uyyale ADuvAga |
aDigaDige tAMbUla meluvAgalu [2]
paripari rAgadiMda paripari mAtiniMda |
paripari gIta prasaMgadiMda ||
paripUrNanAda SrI puraMdaraviThThalana |
hiridAgi manadoLage smarisutiharu [3]
Leave a Reply