Composer : Shri Purandara dasaru
ತೋಳು ತೋಳು ತೋಳು ರಂಗ ತೋಳನ್ನಾಡೈ |
ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ |
ಘಲಿರು ಘಲಿರೆಂಬ ಗೆಜ್ಜಿಲಿ ನಲಿವುತ್ತ ತೋಳನ್ನಾಡೈ |
ನಿಲುವಿಗೆ ನಿಲುಕದ ವೊರಳ ತಂದಿಟ್ಟ ತೋಳನ್ನಾಡೈ ಸ್ವಾಮಿ |
ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ |೧|
ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ |
ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ |
ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ |
ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ |೨|
ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ |
ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ |
ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ |
ಬಟ್ಟಲದುಣುವಿಸೆ ನಗುವಾತನೆ ತೋಳನ್ನಾಡೈ |೩|
ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ |
ಅರ್ಜುನನಾ ರಥ ಸಾರಥ್ಯ ಮಾಡಿದ ತೋಳನ್ನಾಡೈ |
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ |
ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ |೪|
ನಖದಿಂದ ಹಿರಣ್ಯಕನುದರವ ಬಗೆದ ತೋಳನ್ನಾಡೈ ಸ್ವಾಮಿ |
ಸುಖದಿಂದ ಪ್ರಹ್ಲಾದನ ಕಾಯ್ದ ತೋಳನ್ನಾಡೈ |
ವಿಖಳಿತಗೆಡಿಸಿದ ಗೋಪ ಸ್ತ್ರೀಯರ ತೋಳನ್ನಾಡೈ |
ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲನೆ ತೋಳನ್ನಾಡೈ |೫|
tOLu tOLu tOLu raMga tOLannADai |
nIlavarNada bAlakRuShNane tOLannADai ||pa||
huliyuguraraLele mAgAyigaLaniTTa tOLannADai svAmi |
ghaliru GalireMba gejjili nalivutta tOLannADai |
niluvige nilukada voraLa taMdiTTa tOLannADai svAmi |
celuva makkaLa muddu mANikave tOLannADai |1|
pUtaniyeMbavaLasuvane hIrida tOLannADai svAmi |
mAteya pitana aNugana maDuhida tOLannADai |
mAtige SiSupAlana Siratarida tOLannADai svAmi |
SrI tulasiya priya nityavinOdi tOLannADai |2|
daTTaDiyiDutale beNNeya meluva tOLannADai svAmi |
kaTTida karaDiya karuveMdeLeda tOLannADai |
baTTala hAla olleMdu kADida tOLannADai svAmi |
baTTaladuNuvise naguvAtane tOLannADai |3|
sajjana satyake dharmava naDesida tOLannADai svAmi |
arjunanA ratha sArathya mADida tOLannADai |
lajjegIDAda draupadi kAyda tOLannADai svAmi |
vajrapaMjara pAMDavapriya tOLannADai |4|
naKadiMda hiraNyakanudarava bageda tOLannADai svAmi |
suKadiMda prahlAdana kAyda tOLannADai |
viKaLitageDisida gOpa strIyara tOLannADai |
svAmi suKatIrthara pati puraMdaraviThalane tOLannADai |5|
Leave a Reply