Composer : Shri Pranesha Dasaru
ರಕ್ಷಿಸೆನ್ನನು ದಯಾಂಬುಧೇ ರಕ್ಷಿಸೆನ್ನನು ||ಪ||
ರಕ್ಷಿಸೆನ್ನನು ಪಾಪ ಶಿಕ್ಷಿಸು ಕರುಣದಿ |
ಪಕ್ಷಿವಾಹನ ಪ್ರಿಯ ಅಕ್ಷೋಭ್ಯ ಮುನಿಪ ||ಅ.ಪ.||
ಅನುಮಾನವಿಲ್ಲದೆ ಮಣಿದೆ ತವಾಂಘ್ರಿಗೆ |
ಅನಘ ಶ್ರೀ ಮಾಧವ ಮುನಿ ಕರಜಾತ [೧]
ಜಯ ಮುನಿ ವಂದಿತ ಜಯವಂತ ನೀನೆವೆ |
ದಯ ಮಾಡು ದುಃಖ ಬಯಲಾಗಲರಿಯೆ [೨]
ಪ್ರಾಣೇಶ ವಿಠ್ಠಲನ ಧ್ಯಾನದೊಳಗೆ ಮನ |
ತಾನಿರುವಂದದಿ ಪೋಣಿಸು ಜವದಿ [೩]
rakShisennanu dayAMbudhE rakShisennanu ||pa||
rakShisennanu pApa SikShisu karuNadi |
pakShivAhana priya akShOBya munipa ||a.pa.||
anumAnavillade maNide tavAMGrige |
anaGa SrI mAdhava muni karajAta [1]
jaya muni vaMdita jayavaMta nIneve |
daya mADu duHKa bayalAgalariye [2]
prANESa viThThalana dhyAnadoLage mana |
tAniruvaMdadi pONisu javadi [3]
Leave a Reply