Composer : Shri Karpara Narahari
ಶ್ರೀಮದಕ್ಷೋಭ್ಯ ತೀರ್ಥರ ದಿವ್ಯ ಚರಿತಂ
ಕಾಮಿತ ಪ್ರದವಹುದು ಶೃಣ್ವತಾಂ ಸತತಂ ||ಪ||
ಈ ಮಹಿಯೊಳವತರಿಸಿ ಭೂಮಿಜಾಸಹಿತ ಶ್ರೀ
ರಾಮನಂಘ್ರಿ ದ್ವಯವ ಪೂಜಿಸುತಲಿ
ಭೂಮಿ ನಿರ್ಜರ ಜನಸ್ತೋಮ ವಂದಿತರಾಗಿ
ವ್ಯೋಮ ಕೇಶಾಂಶರೆಂದೆನಿಸಿ ಮೆರೆದಂಥ |೧|
ಮೋದತೀರ್ಥರ ಮತ ಮಹೋದಧಿಗೆ ಪೂರ್ಣನು
ದೀಧಿತಿಯೆಂದೆನಿಸಿ ದಿಗ್ವಲಯದಿ
ಭೇದ ಬೋಧಕ ಸೂತ್ರ ವಾದದಿಂದಲಿ ಮಹಾ
ವಾದಿ ವಿದ್ಯಾರಣ್ಯ ಯತಿವರನ ಜಯಿಸಿದ |೨|
ವಿಟ್ಠಲನ ಪದಪದುಮ ಷಟ್ಪದರೆಂದೆನಿಸಿ
ಸ್ವಪ್ನಸೂಚಿತ ಚಂದ್ರಭಾಗ ತಟದಿ
ಶ್ರೇಷ್ಠ ಕುದುರೆಯನೇರಿ ನದಿಯ ಜಲಕುಡಿದವರ
ಇಷ್ಟರೆನ್ನುತ್ತ ಕರೆದು ಕೊಟ್ಟರಾಶ್ರಮವ |೩|
ಸೃಷ್ಟಿಯೊಳು ಮಧ್ವಮತ ಪುಷ್ಠಿಗೈಸುವರೆಂಬ
ದೃಷ್ಟಿಯಿಂದಿವರಿಗೆ ಸುಮುಹೂರ್ತದಿ
ಪಟ್ಟಗಟ್ಟಿದರು ಜಯತೀರ್ಥ ನಾಮವನಿಡುತ
ಕೊಟ್ಟರಾಜ್ಞೆಯನು ದಿಗ್ವಿಜಯ ಮಾಡಿರಿ ಎಂದು |೪|
ದೇಶ ದೇಶದಿ ಬರುವ ಭೂಸುರೋತ್ತಮರ ಅಭಿ
ಲಾಷೆಗಳನೆಲ್ಲ ಪೂರೈಸಿ ಪೊರೆವ
ಶ್ರೀಶಕಾರ್ಪರ ಕ್ಷೇತ್ರವಾಸ ಅಶ್ವತ್ಥನರ
ಕೇಸರಿಯ ನೊಲಿಸಿದ ಯತೀಶರಿವರೆಂದು |೫|
SrImadakShOBya tIrthara divya caritaM
kAmita pradavahudu SRuNvatAM satataM ||pa||
I mahiyoLavatarisi BUmijAsahita SrI
rAmanaMGri dvayava pUjisutali
BUmi nirjara janastOma vaMditarAgi
vyOma kESAMSareMdenisi meredaMtha |1|
mOdatIrthara mata mahOdadhige pUrNanu
dIdhitiyeMdenisi digvalayadi
BEda bOdhaka sUtra vAdadiMdali mahA
vAdi vidyAraNya yativarana jayisida |2|
viTThalana padapaduma ShaTpadareMdenisi
svapnasUcita caMdraBAga taTadi
SrEShTha kudureyanEri nadiya jalakuDidavara
iShTarennutta karedu koTTarASramava |3|
sRuShTiyoLu madhvamata puShThigaisuvareMba
dRuShTiyiMdivarige sumuhUrtadi
paTTagaTTidaru jayatIrtha nAmavaniDuta
koTTarAj~jeyanu digvijaya mADiri eMdu |4|
dESa dESadi baruva BUsurOttamara aBi
lAShegaLanella pUraisi poreva
SrISakArpara kShEtravAsa aSvatthanara
kEsariya nolisida yatISarivareMdu |5|
Leave a Reply