Composer : Shri Vijayadasaru
ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು ||
ರಾಮ ರಾಮ ರಾಮ ರಾಮ
ಹಾಲಾಹಲವನ್ನು ಪಾನವ ಮಾಡಿದ ಫಾಲಲೋಚನನೇ ಬಲ್ಲವನು
ಆಲಾಪಿಸುತ ಶಿಲೆಯಾಗಿದ್ದ , ಬಾಲೆ ಅಹಲ್ಯೆಯ ಕೇಳೇನು (೧)
ಅಂಜಿಕೆಯಿಲ್ಲದೆ ಗಿರಿ ಸಾರಿದ ಕಪಿ , ಕುಂಜರ ರವಿಸುತ ಬಲ್ಲವನು
ಎಂಜಲ ಫಲಗಳ ಹರಿಗೇ ಅರ್ಪಿಸಿದ , ಕಂಜಲೋಚನೆಯ ಕೇಳೇನು (೨)
ಕಾಲವನರಿತು ಸೇವೆಯ ಮಾಡಿದ, ಲೋಲ ಲಕ್ಷ್ಮಣನೆ ಬಲ್ಲವನು
ವ್ಯಾಳಶಯನ ಶ್ರೀವಿಜಯವಿಠ್ಠಲನ ಲೀಲೆ ಶರದಿಯ ಕೇಳೇನು (೩)
rAma rAma eMberaDakShara
prEmadi salahitu sujanaranu |pa|
rAma rAma rAma rAma
hAlAhalavannu pAnava mADida phAlalOcananE ballavanu
AlApisuta shileyAgidda , bAle ahalyeya kELEnu (1)
aMjikeyillade giri sArida kapi , kuMjara ravisuta ballavanu
eMjala phalagaLa harigE arpisida , kaMjalOcaneya kELEnu (2)
kAlavanaritu sEveya mADida, lOla lakShmaNane ballavanu
vyALashayana shrIvijayaviThThalana leele sharadiya kELEnu (3)
Leave a Reply